ಬಾಲ್ಯ ನೆನಪಿಸುವ ಗಣರಾಜ್ಯೋತ್ಸವ!

ಶುಕ್ರವಾರ, 19 ಜನವರಿ 2018 (16:39 IST)
ಬೆಂಗಳೂರು: ಗಣರಾಜ್ಯೋತ್ಸವ ಎಂದ ತಕ್ಷಣ ಬಾಲ್ಯ ನೆನಪಾಗುತ್ತದೆ. ಈ ದಿನದಂದು ನಡೆಯುವ ಪೆರೇಡ್ ಗಾಗಿ ನಾವು ಜನವರಿ ತಿಂಗಳಿನ ಆರಂಭದಲ್ಲಿಯೇ ತಯಾರಿ ಮಾಡಿಕೊಳ್ಳುತ್ತಿದ್ದೇವು. ಕ್ಲಾಸ್ ರೂಂನ ಅಲಂಕಾರದಿಂದ ಹಿಡಿದು ಇಡೀ ಶಾಲೆಯ ಮೈದಾನವನ್ನು ತಳಿರು ತೋರಣಗಳಿಂದ ಸಿಂಗಾರ ಮಾಡುತ್ತಿದ್ದ ಅತ್ಯಂತ ಸಂಭ್ರಮದ ಕ್ಷಣವಾಗಿತ್ತು.

 
ಜನವರಿ 26ರಂದು ಎಂದಿಗಿಂತ ಬೆಳಿಗ್ಗೆ ಬೇಗನೇ ಎದ್ದು ಸಮವಸ್ತ್ರ ಧರಿಸಿ ಶಾಲೆಗೆ ಹೋಗುವುದೆಂದರೆ ಎಲ್ಲಿಲ್ಲದ ಖುಷಿಯ ವಿಷಯವಾಗಿತ್ತು.  ಆ ದಿನ ಇಡೀ ಯಾವುದೇ ತರಗತಿಗಳು ಇಲ್ಲದೇ, ಬರಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೇ ಕಳೆದುಹೋಗುತ್ತಿದ್ದೇವು. ಊರಹಬ್ಬಕ್ಕಿಂತ ಹೆಚ್ಚಿನ ಸಂತೋಷ ಈ ಗಣರಾಜ್ಯೋತ್ಸವ ಆಗ ನಮಗೆ ನೀಡುತ್ತಿತ್ತು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ