ನವದೆಹಲಿ: 2018 ರ ಜನವರಿ 26 ರಂದು ಭಾರತ ದೇಶಕ್ಕೆ 69ನೇ ಗಣರಾಜ್ಯೋತ್ಸವದ ಸಂಭ್ರಮ. ಭಾರತ ಪ್ರಜಾಪ್ರಭುತ್ವ ದೇಶವಾಗಿ ಮಾರ್ಪಟ್ಟು 69 ವರ್ಷಗಳಾಗುತ್ತವೆ. ಈ ಗಣರಾಜ್ಯೋತ್ಸವದಂದು ಆಗ್ನೇಯ ಏಷ್ಯಾ ದೇಶಗಳ ಒಕ್ಕೂಟದ (ಆಸಿಯಾನ್) 10 ದೇಶಗಳ ನಾಯಕರು ಪಾಲ್ಗೋಳ್ಳುತ್ತಿರುವುದು ವಿಶೇಷವಾಗಿದೆ.
ಗಣರಾಜ್ಯೋತ್ಸವದಲ್ಲಿ ಆಸಿಯಾನ್‌ದ ಹತ್ತು ದೇಶಗಳ ಪ್ರಮುಖರು ಮತ್ತು ಅವರ ಕುಟುಂಬ ಸದಸ್ಯರು ಪಾಲ್ಗೊಳ್ಳಲಿದ್ದು ಪರೇಡ್‌ನಲ್ಲಿ ಆಸಿಯಾನ್-ಇಂಡಿಯಾ ಟ್ಯಾಬ್ಲೋ ಪ್ರಮುಖ ಆಕರ್ಷಣೆಯನ್ನು ಪಡೆಯಲಿದೆ. ಟ್ಯಾಬ್ಲೋದಲ್ಲಿ ರಾಮಾಯಣದ ಪ್ರಸಂಗವನ್ನು ಕಲಾವಿದರು ಪ್ರದರ್ಶಿಸಲಿದ್ದಾರೆ.
ವಿದೇಶಿ ಗಣ್ಯರು ಅತಿಥಿಗಳಾಗಿ ಆಗಮಿಸುತ್ತಿರುವುದರಿಂದ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕೇಂದ್ರ ಲೋಕೋಪಯೋಗಿ ಇಲಾಖೆಯು 95 ಅಡಿ ಅಗಲದ ವೇದಿಕೆ ಸಿದ್ಧಪಡಿಸುತ್ತಿದೆ. ಇದೇ ಸಂದರ್ಭದಲ್ಲಿ ನವದೆಹಲಿಯಲ್ಲಿ ಆಸಿಯಾನ್-ಇಂಡಿಯಾ ದೇಶಗಳ ಮೈತ್ರಿಕೂಟವಾಗಿ 25 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಸಿಯಾನ್ ರಾಷ್ಟ್ರಗಳ ಸಮಾವೇಶವು ನಡೆಯಲಿದೆ.
ಥೈಲ್ಯಾಂಡ್, ವಿಯೆಟ್ನಾಂ, ಇಂಡೋನೇಷ್ಯಾ, ಮಲೇಷ್ಯಾ, ಪಿಲಿಪೀನ್ಸ್, ಸಿಂಗಪುರ್, ಮ್ಯಾನ್ಮಾರ್, ಕಾಂಬೋಡಿಯಾ, ಲಾವೋಸ್, ಬ್ರೂನೆ ದೇಶಗಳ ಒಕ್ಕೂಟವೇ ಆಗ್ನೇಯ ಏಷ್ಯಾ ದೇಶಗಳ ಒಕ್ಕೂಟ (ಆಸಿಯಾನ್).