ದಿನದ ಪ್ರಾರಂಭದಲ್ಲಿ ಚೇತರಿಕೆಯ ವ್ಯವಹಾರ ಪ್ರಾರಂಭಿಸಿದ ಶೇರು ವ್ಯವಹಾರ ಅಂತಿಮವಾಗಿ ನಷ್ಟದಲ್ಲಿ ವಹಿವಾಟು ಅಂತ್ಯಗೊಳಿಸಿತು. ಜಾಗತಿಕ ಮಟ್ಟದಲ್ಲಿ ಶೇರು ವ್ಯವಹಾರ ಕಳಾಹೀನವಾಗಲೂ ಆದರೂ ಬ್ಯಾಂಕಿಂಗ್ ವಲಯದ ಶೇರುಗಳು ಕಾರಣ ಎನ್ನುವುದು ಮಾರುಕಟ್ಟೆಯ ಅಭಿಪ್ರಾಯ.
ಜನವರಿ 31ರವರೆಗೆ ಐಸಿಐಸಿಐ ಬ್ಯಾಂಕ್ 264 ಶತಕ ಕೋಟಿ ಡಾಲರುಗಳ ಸಬ್ಪ್ರೈಮ್ ಬಿಕ್ಕಟ್ಟಿನಲ್ಲಿ ಕಳೆದುಕೊಂಡಿರುವುದು ಬ್ಯಾಂಕಿಂಗ್ ವಲಯದ ಶೇರುಗಳ ನಷ್ಟಕ್ಕೆ ಕಾರಣವಾಯಿತು. ಆದರೆ ಬ್ಯಾಂಕ್ ಆಡಳಿತ ಮಂಡಳಿಯು ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ 50 ಶತಕೋಟಿ ಡಾಲರ್ ನಷ್ಟವನ್ನು ಬ್ಯಾಂಕ್ ಅನುಭವಿಸಿದೆ. ಬ್ಯಾಂಕಿನ ಸಹ ಸಂಸ್ಥೆಗಳು 25 ಶತಕೋಟಿ ಡಾಲರ್ ನಷ್ಟ ಅನುಭವಿಸಿವೆ ಎಂದು ಸ್ಪಷ್ಟಪಡಿಸಿದೆ.
ರಾಷ್ಟ್ರೀಯ ಶೇರು ಸೂಚ್ಯಂಕವು ಅಪಾಯದ ಮಟ್ಟವನ್ನು ತಲುಪಿದ್ದು 4800ರ ಗಡಿಗೆ ಮಂಗಳವಾರದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ ಸೂಚ್ಯಂಕವು 4820ಕ್ಕೆ ತಲುಪಿದೆ. ಬಿಎಸ್ಇ ಸಂವೇದಿ ಸೂಚ್ಯಂಕವು 16,339ಕ್ಕೆ ವಹಿವಾಟು ಅಂತ್ಯಗೊಳಿಸಿದೆ. ಮಂಗಳವಾರದ ವಹಿವಾಟಿನಲ್ಲಿ ಬಿಎಸ್ಇ 337 ಅಂಶಗಳನ್ನು ಮತ್ತು ನಿಫ್ಟಿ 88 ಅಂಶಗಳ ನಷ್ಟ ಅನುಭವಿಸಿದೆ.
ಎಸ್ಬಿಐ,ರಿಲಯನ್ಸ್ ಕ್ಯಾಪಿಟಲ್, ರಿಲಯನ್ಸ್, ಐಸಿಐಸಿಐ ಬ್ಯಾಂಕ್, ರಿಲಯನ್ಸ್ ಕಮ್ಯುನಿಕೇಷನ್ಸ್, ಬ್ಯಾಂಕ್ ಆಫ್ ಇಂಡಿಯಾ ಮುಂತಾದ ಪ್ರಮುಖ ಕಂಪನಿಗಳ ಶೇರುಗಳ ಮಾರಾಟ ಹೆಚ್ಚಿನ ಪ್ರಮಾಣದಲ್ಲಿ ದಾಖಲು ಆಯಿತು. ಮಂಗಳವಾರದಂದು ಶೇರು ವಿನಿಮಯ ಕೇಂದ್ರವು ಒಟ್ಟು 60 ಸಾವಿರ ಕೋಟಿ ರೂಗಳ ವಹಿವಾಟು ನಡೆಸಿತು.
ಬುಧವಾರ ಶೇರು ಮಾರುಕಟ್ಟೆ ಸಾಧಾರಣವಾಗಿ ವಹಿವಾಟು ಪ್ರಾರಂಭಿಸಬಹುದು. ನಿಫ್ಟಿ 4820-4800 ರೊಳಗೆ ವ್ಯವಹಾರ ನಡೆಸಿದರೆ ಮಾತ್ರ ಶೇರು ಕೇಂದ್ರದಲ್ಲಿ ಚೇತರಿಕೆಯ ವ್ಯವಹಾರ ಕಾಣಬಹುದು.