ಚೇತರಿಸಿಕೊಂಡ ಶೇರು ಮಾರುಕಟ್ಟೆ

ರಾಜೇಶ್ ಪಾಲವೀಯಾ

ಬುಧವಾರ, 5 ಮಾರ್ಚ್ 2008 (20:36 IST)
ಇಡೀ ದಿನ ಚಂಚಲವಾಗಿದ್ದ ಶೇರು ಮಾರುಕಟ್ಟೆಯು ಅಂತಿಮವಾಗಿ ಚೇತರಿಸಿಕೊಂಡು ಋಣಾತ್ಮಕ ಶೇರು ವ್ಯವಹಾರವನ್ನು ಅಂತ್ಯಗೊಳಿಸಿತು. ಬುಧವಾರದ ಶೇರು ವಹಿವಾಟು ಪೂರ್ಣಗೊಂಡ ನಂತರ ಸಂವೇದಿ ಸೂಚ್ಯಂಕವು 202 ಅಂಶಗಳ ಏರಿಕೆ ದಾಖಲಿಸಿದೆ. 16542ಕ್ಕೆ ವ್ಯವಹಾರ ಅಂತ್ಯಗೊಳಿಸಿದೆ.


ಸತ್ಯಮ್, ಇನ್ಫೋಸಿಸ್, ವಿಪ್ರೋ, ಐಟಿಸಿ, ಮಾರುತಿ,ಹಿಂಡಾಲ್ಕೊ, ಓಎನ್‌ಜಿಸಿ, ರಿಲಯನ್ಸ್ ಲಿಮಿಟೆಡ್, ಎಲ್ಐಸಿ ಹೌಸಿಂಗ್, ಮ್ಯಾಕಡೊವೆಲ್, ಎಚ್‍‌ಡಿಎಫ್‌ಸಿಯ ಶೇರುಗಳು ತೇಜಿಯಾಗಿದ್ದವು. ಬಜಾಜ್ ಅಟೋ, ರೇಣುಕಾ ಶುಗರ್ಸ್, ರಿಲಯನ್ಸ್, ನಾಗಾರ್ಜುನ್ ಫರ್ಟಿಲೈಜರ್ಸ್ ಕಂಪನಿಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದು ಕಂಡು ಬಂದಿದೆ.


ಮಹಾಶಿವರಾತ್ರಿಯ ಕಾರಣ ಗುರುವಾರ ಶೇರು ಪೇಟೆಗೆ ರಜೆ ಇರುವುದರಿಂದ ಶೇರು ವಹಿವಾಟು ನಡೆಯಲಿದೆ.

ಶುಕ್ರವಾರ ಶೇರು ವ್ಯವಹಾರವು ಚೇತರಿಕೆಯೊಂದಿಗೆ ಪ್ರಾರಂಭವಾಗುವ ಲಕ್ಷಣಗಳು ಇವೆ ನಿಫ್ಟಿ 20-35 ಅಂಶಗಳ ಏರಿಕೆ ದಾಖಲಾಗಬಹುದು. ನಿಫ್ಟಿ 4945-4955 ಅಂಶಗಳ ನಡುವೆ ವ್ಯವಹಾರ ಸ್ಥಗಿತಗೊಳಿಸಬಹುದು. ಒಂದು ವೇಳೆ ನಿಫ್ಟಿ ಈ ಹಂತದಿಂದ ಚೇತರಿಕೆ ಕಂಡುಕೊಂಡರೆ ಶೇರು ವ್ಯವಹಾರದಲ್ಲಿ ಭಾರಿ ಚೇತರಿಕೆ ಕಂಡು ಬರಬಹುದು.

ಗಮನಿಸಬೇಕಾದ ಶೇರುಗಳು ಎಲ್‌ಐಸಿ ಹೌಸಿಂಗ್, ರಿಲಯನ್ಸ್ ಇಂಡಸ್ಟ್ರೀಸ್, ಗುಜರಾತ್ ಎನ್ಆರ್ಇ, ಹಿಂಡಾಲ್ಕೊ, ಕೊಟಕ್ ಬ್ಯಾಂಕ್, ಆರ್‌ಪಿಎಲ್ ಶೇರುಗಳ ಮೌಲ್ಯವನ್ನು ಶುಕ್ರವಾರದ ವಹಿವಾಟಿನಲ್ಲಿ ಗಮನಿಸಬಹುದು.

ವೆಬ್ದುನಿಯಾವನ್ನು ಓದಿ