ಸೆನ್ಸೆಕ್ಸ್: ನಿಫ್ಟಿಗೆ ಅಚ್ಚರಿಯ ನೂರಂಶ ಏರಿಕೆ

ಗುರುವಾರದ ಶೇರು ವಹಿವಾಟಿನಲ್ಲಿ ಸಮರ್ಥ ಆರಂಭ ಕಂಡ ಮಾರುಕಟ್ಟೆ ತನ್ನ ಏರುಗತಿಯನ್ನು ಉಳಿಸಿಕೊಂಡಿತಲ್ಲದೆ, ನಿಫ್ಟಿಯು 5100 ಗೆರೆಯನ್ನು ದಾಟಿದರೆ, ಸೆನ್ಸೆಕ್ಸ್ 17300ಕ್ಕಿಂತ ಮೇಲೇರಿತು. ಇಡೀ ದಿನ ಮಿಡ್‌ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್‌ಗಳು ಏರುಗತಿಯಲ್ಲೇ ಇದ್ದವು. ಮಾರುಕಟ್ಟೆಯೂ ಪ್ರಬಲವಾಗಿತ್ತು. ಜಾಗತಿಕವಾಗಿ ನೋಡಿದರೆ, ಏಷ್ಯಾ ಮಾರುಕಟ್ಟೆಯಲ್ಲಿ ಮಿಶ್ರ ಪ್ರತಿಫಲ ಕಂಡುಬಂದಿತು. ಯೂರೋಪಿನಲ್ಲಿಯೂ ಇದೇ ಪರಿಸ್ಥಿತಿ. ರಿಯಲ್ ಎಸ್ಟೇಟ್, ಸಾಫ್ಟ್‌ವೇರ್ ಮತ್ತು ಕ್ಯಾಪಿಟಲ್ ಸರಕುಗಳು ಮುಂಚೂಣಿಯಲ್ಲಿದ್ದವು.

ಶುಕ್ರವಾರವೂ ಮಾರುಕಟ್ಟೆಗೆ ಸಂಬಂಧಿಸಿ ಅತ್ಯಂತ ಮಹತ್ವದ ದಿನ. ಯಾಕೆಂದರೆ ಮಧ್ಯಾಹ್ನ ವೇಳೆಗೆ ಹಣದುಬ್ಬರದ ದರವೂ ಘೋಷಣೆಯಾಗುತ್ತದೆ. ಇದು ಮಾರುಕಟ್ಟೆ ಮೇಲೆ ಪ್ರಮುಖವಾಗಿ ಪರಿಣಾಮ ಬೀರಬಹುದಾಗಿದೆ. ಗುರುವಾರ ಮಾರುಕಟ್ಟೆ ಕೊನೆಗೊಂಡ ರೀತಿಯನ್ನು ನೋಡಿದರೆ, ನಿಫ್ಟಿಯಲ್ಲಿ ಸುಮಾರು 15-20 ಅಂಶ ಏರಿಕೆಯೊಂದಿಗೆ ನಾಳೆ ಮಾರುಕಟ್ಟೆ ಪ್ರಾರಂಭವಾಗುವ ನಿರೀಕ್ಷೆ ಇದೆ.

5130-5140ರ ಆಸುಪಾಸು ಆರಂಭಗೊಳ್ಳಲಿರುವ ನಿಫ್ಟಿ, ಏರುಗತಿಯನ್ನು ಕಾಯ್ದುಕೊಂಡರೆ 5175-5190 ವರೆಗೂ ಏರುವ ನಿರೀಕ್ಷೆ ಇದೆ. ಮಾರುಕಟ್ಟೆಯಲ್ಲಿನ ಪ್ರಮುಖ ಶೇರುಗಳು 5190ಕ್ಕಿಂತ ಮೇಲೇರುವ ಸಾಧ್ಯತೆಗಳಿರುವುದರಿಂದ ನಿಫ್ಟಿಯೂ ಕಿರು ಅವಧಿಯಲ್ಲಿ 5050-5015 ವರೆಗೆ ಏರಬಹುದಾಗಿದೆ.

ಮೇ 19ರಂದು ಬುದ್ಧ ಜಯಂತಿ ಪ್ರಯುಕ್ತ ಮಾರುಕಟ್ಟೆಗೆ ರಜೆ ಇರುವುದರಿಂದ ಶುಕ್ರವಾರದ ವಹಿವಾಟಿನ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಶುಕ್ರವಾರದ ವಹಿವಾಟಿನಲ್ಲಿ ನಿಫ್ಟಿ ಏರುಗತಿ ಕಾಣುವ ನಿರೀಕ್ಷೆ ಇದೆ. ಶುಕ್ರವಾರದ ವ್ಯವಹಾರದ ಸಂದರ್ಭ ಪ್ರಜ್ ಇಂಡ್, ಚಂಬಲ್ ಫರ್ಟಿ, ಡಿಎಲ್ಎಫ್, ಸೈಲ್, ಸೀಮೆನ್ಸ್ ಮುಂತಾದವುಗಳ ಮೇಲೆ ಗಮನ ಹರಿಸಬಹುದು.

ವೆಬ್ದುನಿಯಾವನ್ನು ಓದಿ