ಸೆನ್ಸೆಕ್ಸ್: 33 ಪಾಯಿಂಟ್‌ಗಳ ಕುಸಿತ ಕಂಡ ಶೇರುಪೇಟೆ ಸೂಚ್ಯಂಕ

ಶನಿವಾರ, 23 ಜುಲೈ 2016 (18:47 IST)
ವಾರಂತ್ಯದ ವಹಿವಾಟಿನಲ್ಲಿ ಶೇರುಪೇಟೆಯ ಸೂಚ್ಯಂಕ ವಹಿವಾಟಿನ ಮುಕ್ತಾಯಕ್ಕೆ 33.26 ಪಾಯಿಂಟ್‌ಗಳ ಕುಸಿತ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
 
ಜಿಎಸ್‌ಟಿ ಮಸೂದೆ ಅಂಗೀಕಾರ, ಉತ್ತಮ ಮುಂಗಾರು ಮಳೆ ಹಾಗೂ ಕಾರ್ಪೋರೇಟ್ ಕಂಪೆನಿಗಳ ತ್ರೈಮಾಸಿಕ ಫಲಿತಾಂಶದ ಮಧ್ಯೆಯೂ ಶೇರುಪೇಟೆ ಸೂಚ್ಯಂಕ ಕುಸಿತ ಕಂಡಿದೆ.
 
ಬಿಎಸ್‌ಇ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 33.26 ಪಾಯಿಂಟ್‌ಗಳ ಕುಸಿತ ಕಂಡು 27,803.24 ಅಂಕಗಳಿಗೆ ತಲುಪಿದೆ.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ವಹಿವಾಟಿನ ಮುಕ್ತಾಯಕ್ಕೆ 0.20 ಪಾಯಿಂಟ್‌ಗಳ ಕುಸಿತ ಕಂಡು 8,541.20 ಅಂಕಗಳಿಗೆ ತಲುಪಿದೆ. 
 
ತೈಲ ಮತ್ತು ಅನಿಲ, ಹೆಲ್ತ್‌ಕೇರ್, ರಿಯಲ್ಟಿ, ವಿದ್ಯುತ್, ಉಕ್ಕು, ಐಟಿ, ತಂತ್ರಜ್ಞಾನ ಮತ್ತು ಎಫ್‌ಎಂಸಿಜಿ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ