ಕ್ರಿಕೆಟ್ ಆರಾಧನೆಯಿಂದ ಇತರ ಕ್ರೀಡೆಗಳ ಅವನತಿ: ಮಿಲ್ಕಾ

ಬುಧವಾರ, 16 ಅಕ್ಟೋಬರ್ 2013 (16:41 IST)
PTI
ನಾನು ಕ್ರಿಕೆಟ್ ವಿರೋಧಿ ಯಲ್ಲ. ಆದರೆ ಭಾರತದಲ್ಲಿ ಕ್ರಿಕೆಟ್ ಮೇಲಿನ ವಿಪರೀತ ವ್ಯಾಮೋಹದಿಂ ದಾಗಿ ಉಳಿದ ಕ್ರೀಡೆಗಳಿಗೆ ಹಿನ್ನಡೆಯಾಗುತ್ತಿದೆ. ಕ್ರಿಕೆಟ್ ಪ್ರೀತಿಸಿ; ಹಾಗೇ ಬೇರೆ ಕ್ರೀಡೆಗಳಿಗೂ ಆದ್ಯತೆ ನೀಡಿ’

-ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಸುಬ್ರತಾ ರಾಯ್ ಸಹಾರಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಏಕದಿನ ಕ್ರಿಕೆಟ್ ಪಂದ್ಯ ವೀಕ್ಷಿಸಲು ಬಂದಿದ್ದ ಮಾಜಿ ಅಥ್ಲೀಟ್ ಮಿಲ್ಖಾ ಸಿಂಗ್ ಪ್ರತಿಕ್ರಿಯಿಸಿದ ರೀತಿ ಇದು.

ಮಿಲ್ಖಾ ಈ ಪಂದ್ಯವನ್ನು ಜನರ ಮಧ್ಯೆ ಕುಳಿತು ವೀಕ್ಷಿಸಿದರು. ಪ್ರೇಕ್ಷಕರು ಆಟೊಗ್ರಾಫ್‌ಗಾಗಿ ಅವರನ್ನು ಮುತ್ತಿ ಕೊಂಡಿದ್ದರು. ‘ಮಿಲ್ಖಾ ಮಿಲ್ಖಾ’ ಎಂದು ಅಭಿಮಾನದಿಂದ ಕೂಗುತ್ತಿ ದ್ದರು. ಭಾರತದಲ್ಲಿ ಒಬ್ಬ ಅಥ್ಲೀಟ್‌ಗೆ ಇಷ್ಟೊಂದು ಅಭಿಮಾನಿಗಳು ಇದ್ದಾರೆಯೇ ಎಂಬ ಅನುಮಾನ ಬರುವಷ್ಟು ಪ್ರೀತಿ ಅಲ್ಲಿತ್ತು. ಅನಾರೋಗ್ಯಕ್ಕೆ ಒಳಗಾಗಿದ್ದರೂ ಅವರು ಉಲ್ಲಾಸದಿಂದ ಪ್ರೇಕ್ಷಕರತ್ತ ಕೈ ತೋರಿಸಿ ಖುಷಿಪಟ್ಟರು.

ಈ ಸಂದರ್ಭದಲ್ಲಿ ಅವರನ್ನು ಸಂಘಟಕರು ‘ಕಾಮೆಂಟರಿ ಬಾಕ್ಸ್’ಗೆ ಆಹ್ವಾನಿಸಿದ್ದರು. ಅಲ್ಲಿ ಕಪಿಲ್ ದೇವ್, ಸುನಿಲ್ ಗಾವಸ್ಕರ್ ಹಾಗೂ ರಮೀಜ್ ರಾಜಾ ಜೊತೆ ಮಿಲ್ಖಾ ಸ್ವಲ್ಪ ಹೊತ್ತು ಮಾತಿನ ಚಟಾಕಿ ಆರಿಸಿದರು.

ವೆಬ್ದುನಿಯಾವನ್ನು ಓದಿ