ಟೆನಿಸ್‌‌‌ ಶ್ರೇಯಾಂಕ: ಭಾರತೀಯರ ಶ್ರೇಯಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ

ಮಂಗಳವಾರ, 8 ಏಪ್ರಿಲ್ 2014 (16:08 IST)
PR
ಭಾರತದ ಡೆವಿಸ್‌‌‌‌ಕಪ್‌ನಲ್ಲಿ ಸೋಮದೇವ್ ದೇವವರ್ಮನ್ ಕೊರಿಯಾ ವಿರುದ್ದ ಗೆಲುವನ್ನು ಸಾಧಿಸುವುದರ ಮೂಲಕ ಸೋಮವಾರ ಜಾರಿಯಾದ ವಿಶ್ವ ರ್ಯಾಂಕಿಗ್‌‌‌ನ ಪುರುಷ ಸಿಂಗಲ್ಸ್‌‌‌‌ನಲ್ಲಿ ಯಾವುದೇ ಬದಲಾವಣೆ ಆಗದೆ 88 ನೇ ಸ್ಥಾನದಲ್ಲಿಯೇ ಉಳಿದುಕೊಂಡಿದ್ದಾರೆ ಮತ್ತು ಡಬಲ್ಸ್‌‌‌‌ನ ಆಟಗಾರರ ಶ್ರೇಯಾಂಕಿತದಲ್ಲಿ ಕೂಡ ಯಾವುದೇ ಬದಲಾವಣೆ ಆಗಿಲ್ಲ.

ಡಬಲ್ಸ್‌‌‌‌ನಲ್ಲಿ ಲಿಯಾಂಡರ್‌ ಪೇಸ್‌‌ ಈಗಲೂ ಕೂಡ 10ರೊಳಗಿನ ಸ್ಥಾನದಲ್ಲಿಯೇ ಉಳಿದುಕೊಂಡ ಎಕೈಕ ಭಾರತಿಯ ಆಟಗಾರರಾಗಿದ್ದಾರೆ. ಎಟಿಪಿ ವಿಶ್ವ ಶ್ರೇಯಾಂಕಿತದಲ್ಲಿ ಪೇಸ್ 10 ನೇ ಸ್ಥಾನದಲ್ಲಿ ಇದ್ದಾರೆ. ರೋಹನ್‌ ಬೋಪಣ್ಣಾ 14 ನೇ ಮತ್ತು ಮಹೇಶ್ ಭೂಪತಿ 47 ನೇ ಸ್ಥಾನದಲ್ಲಿ ಇದ್ದಾರೆ. ದಿವಿಜ್‌ ಶರಣ್ 65 ನೇ ಮತ್ತು ಪುರವ್ ರಾಜಾ 79 ನೇ ಸ್ಥಾನದಲ್ಲಿ ಇದ್ದಾರೆ. 100 ಶ್ರೇಯಾಂಕಿತ ದೊಳಗಡೆ ಇನ್ನು ಇಬ್ಬರು ಆಟಗಾರರು ಇದ್ದಾರೆ. ಆದರೆ ಕ್ರಮವಾಗಿ ಇವರು 2 ಮತ್ತು 6 ನೇ ಸ್ಥಾನದ ಕುಸಿತ ಕಂಡಿದ್ದಾರೆ. ಮಹಿಳಾ ಡಬಲ್ಸ್‌‌‌‌ನಲ್ಲಿ ಸಾನಿಯಾ ಮಿರ್ಜಾ ಈಗಲೂ 8 ನೇ ಸ್ಥಾನದಲ್ಲಿ ಇದ್ದಾರೆ.

ಈ ನಡುವೆ ಪುರುಷ ಸಿಂಗಲ್ಸ್‌‌ನಲ್ಲಿ ಸ್ಪೇನ್‌‌ನ ರಾಫೆಲ್‌ ನಡಾಲ್‌ ಅಗ್ರ ಸ್ಥಾನದಲ್ಲಿಯೇ ಇದ್ದಾರೆ. ನಂತರದ ಸ್ಥಾನದಲ್ಲಿ ಜೋಕೋವಿಚ್‌ ,ಸ್ಟೆನಿಸ್‌‌ಲಾಸ್ ವಾವರಿಂಕಾ ಮತ್ತು ರೋಜರ್‌ ಫೆಡರರ್‌‌ ಇದ್ದಾರೆ. ಡಬ್ಲ್ಯೂಟಿಎ ಸಿಂಗಲ್ಸ್‌‌‌ನ ಶ್ರೇಯಾಂಕಿತದಲ್ಲಿ ಸೆರೆನಾ ವಿಲಿಯಮ್ಸ್‌‌, ಲೀ ನಾ, ಎಗ್ನಿಸಿಯಾ ರಾದವಾಂಸ್ಕಾ ಮತ್ತು ವಿಕ್ಟೋರಿಯಾ ಅಜರೆಂಕಾ ಅಗ್ರ 4ನೇ ಸ್ಥಾನದಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ