ಮಹಿಳಾ ಕಬಡ್ಡಿ ಪಟುಗಳ ನಡುವೆ ಮಾರಾಮಾರಿ

ಶನಿವಾರ, 21 ಡಿಸೆಂಬರ್ 2013 (16:09 IST)
PR
ಮಧ್ಯಪ್ರದೇಶದ ಸತನಾ ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕಬಡ್ಡಿ ಸ್ಪರ್ಧೆಯ ಸೆಮಿಫೈನಲ್‌‌ನಲ್ಲಿ ಅಂಡರ್- 17 ವರ್ಷ ವಿಭಾಗದ ಪಂದ್ಯದಲ್ಲಿ ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಲದ ಕ್ರೀಡಾಪಟುಗಳ ನಡುವೆ ಕೈಕೈ ಮಿಲಾಯಿಸುವ ಘಟನೆ ನಡೆದಿದೆ. ಘಟನೆಯಲ್ಲಿ ಕೆಲವು ಯುವತಿಯರನ್ನು ಕ್ರೀಡಾಂಗಣದಲ್ಲಿ ದರ ದರನೆ ಎಳೆದಾಡಿದಂತಹ ಹೇಯ ಕೃತ್ಯ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ. ಪಶ್ಚಿಮ ಬಂಗಾಳದ ಕಬಡ್ಡಿ ಪಟುಗಳಾದ ಜಯಂತಿ ಶಹಾ ಮತ್ತು ಸರಸ್ವತಿ ಕುದ್ನುಗೆ ಗಾಯವಾಗಿದೆ

ಈ ಜಗಳದಲ್ಲಿ ಎರಡು ಜನ ಆಟಗಾರ್ತಿಯರಿಗೆ ಗಾಯವಾಗಿದೆ. ನಂತರ ವಿವಾದಕ್ಕೆ ತೆರೆಎಳೆಯಲಾಯಿತು.

ಈ ಕುರಿತು ಪಶ್ಚಿಮ ಬಂಗಾಳ ತಂಡದ ಮ್ಯಾನೇಜರ್‌ ಪ್ರಶಾಂತ್ ಮೆಹರಾ ಆಯೋಜನ ಸಮಿತಿಗೆ ದೂರನ್ನು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ