ಭಾರತಕ್ಕೆ ಆಸ್ಟ್ರೇಲಿಯನ್ ಫುಟ್ಬಾಲ್ ಲೀಗ್ ಪ್ರವೇಶ

ಮಂಗಳವಾರ, 6 ಮೇ 2008 (13:23 IST)
ಭಾರತದಲ್ಲಿನ ಮಾರುಕಟ್ಟೆಯನ್ನು ಗಮನಿಸಿರುವ ಆಸ್ಟ್ರೇಲಿಯನ್ ಫುಟ್ಬಾಲ್ ಲೀಗ್ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಉದ್ದೇಶಿಸಿದ್ದು ಈ ನಿಟ್ಟಿನಲ್ಲಿ ಮುಂದಿನ ಫೆಬ್ರವರಿ ಇಲ್ಲವೇ 2010ರಲ್ಲಿ ಮೊದಲ ಫುಟ್ಬಾಲ್ ಲೀಗ್ ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆ ಇದೆ.

ಫುಟ್ಬಾಲ್, ಬಾಸ್ಕೆಟ್ ಬಾಲ್ ಮತ್ತು ರಗ್ಬಿ ಕ್ರೀಡೆಗಳನ್ನು ಒಳಗೊಂಡಿರುವ ಆಸ್ಟ್ರೇಲಿಯನ್ ಫುಟ್ಬಾಲ್ ಲೀಗ್‌ನ ಅಧಿಕಾರಿಗಳು ಭಾರತದ ಪ್ರಮುಖ ನಗರಗಳಿಗೆ ಭೇಟಿ ನೀಡಿ ಈ ಕುರಿತು ಪರಿಶೀಲನೆ ನಡೆಸಿದ್ದಾರೆ. ಪ್ರಾಯೋಜಕತ್ವಕ್ಕಾಗಿ ಇಲ್ಲಿನ ಕಂಪನಿಗಳ ಜೊತೆ ಮಾತುಕತೆ ಈಗಾಗಲೇ ಪ್ರಾರಂಭಿಸಲಾಗಿದ್ದು, ಫೆಬ್ರವರಿ 2009 ಇಲ್ಲವೇ 2010ರಲ್ಲಿ ಉದ್ಘಾಟನಾ ಪಂದ್ಯವನ್ನು ಆಯೋಜಿಸುವುದಾಗಿ ಎಎಫ್ಎಲ್ ಮ್ಯಾನೇಜರ್ ಡೇಲ್ ಹೋಮ್ಸ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಆಸ್ಟ್ರೇಲಿಯದಲ್ಲಿ ಅತ್ಯಂತ ಜನಪ್ರಿಯವಾಗಿರುವ ಕ್ರೀಡೆಗಳನ್ನು ನಾವು ಭಾರತದ ಪ್ರಮುಖ ನಾಲ್ಕು ನಗರಗಳಲ್ಲಿ ಪರಿಚಯಿಸಲಿದ್ದೇವೆ. ಆಸ್ಟ್ರೇಲಿಯದಲ್ಲಿ ನಾಲ್ಕು ಲಕ್ಷ ಅನಿವಾಸಿ ಭಾರತೀಯರು ವಾಸಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಭಾರತದಲ್ಲಿ ರಗ್ಬಿಯನ್ನು ಜನಪ್ರಿಯಗೊಳಿಸುವುದು ಅಷ್ಟು ಸುಲಭದ ಸವಾಲು ಅಲ್ಲ ಎಂದು ಹೇಳಿದ ಅವರು ಈ ನಿಟ್ಟಿನಲ್ಲಿ ಎಎಫ್ಎಲ್ ಇಲ್ಲಿನ ಕಾರ್ಪೋರೇಟ್ ಕಂಪನಿಗಳ ಪ್ರಾಯೋಜಕತ್ವವನ್ನು ಮೊದಲು ಪಡೆಯಲಿದೆ. ಭಾರತದಲ್ಲಿ ಆಸ್ಟ್ರೇಲಿಯನ್ ಕ್ರಿಕೆಟ್ ತಂಡದ ನಾಯಕ ರಿಕಿ ಪಾಂಟಿಂಗ್ ಅವರು ಎಎಫ್ಎಲ್ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ವೆಬ್ದುನಿಯಾವನ್ನು ಓದಿ