ಫೆಡ್ ಕಪ್ : ಭಾರತೀಯ ಬಾಲಕಿಯರ ಮುನ್ನಡೆ

ಬುಧವಾರ, 7 ಮೇ 2008 (11:21 IST)
ಮಲೇಷಿಯಾ ಮತ್ತು ಕಜಕ್‌ಸ್ಥಾನ್ ವಿರುದ್ಧ ತಲಾ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದ ಭಾರತೀಯ ಬಾಲಕಿಯರ ತಂಡವು ಹದಿನಾರು ವರ್ಷದೊಳಗಿನವರ ಜ್ಯೂನಿಯರ್ ಫೆಡರೇಷನ್ ಕಪ್ ಟೆನಿಸ್ ಟೂರ್ನಿಯ ಏಷಿಯಾ-ಓಸಿಯಾನಾ ಸಿ ಗುಂಪಿನಲ್ಲಿ ಮುನ್ನಡೆ ಸಾಧಿಸಿದೆ.

ಲೀಗ್ ಹಂತದ ಮೊದಲಿನ ಎರಡು ಪೈಪೋಟಿಗಳಲ್ಲಿ ಭಾರತದ ಬಾಲಕಿಯರು ಹಿನ್ನಡೆ ಅನುಭವಿಸಿದ್ದರು. ರಿಶಿಕಾ ಸುಂಕರಾ ಮತ್ತು ರಶ್ಮಿ ತೆಳತುಂಬೆ ಅವರು ನಾಲ್ಕು ಸಿಂಗಲ್ಸ್‌ಗಳ ಗೆಲುವಿನ ಹತ್ತು ಆಟಗಳನ್ನು ಕೈ ಚೆಲ್ಲಿದ್ದರು. ಗುಂಪಿನ ಆಗ್ರಸ್ಥಾನವನ್ನು ನಿರ್ಧರಿಸಲಿರುವ ಪಂದ್ಯ ಆಸ್ಟ್ರೇಲಿಯ ವಿರುದ್ಧ ಬುಧವಾರ ನಡೆಯಲಿದೆ.

ಅಗ್ರ ಶ್ರೇಯಾಂಕಿತ ತಂಡಗಳಾದ ಉಜ್ಬೇಕಿಸ್ತಾನ್, ಥೈಲ್ಯಾಂಡ್, ಚೀನಾ ಜಪಾನ್ ಮತ್ತು ಚೀನಾ ತೈಪೈಯಿ ತಂಡಗಳು ಈಗಾಗಲೇ ನಾಕ್ ಔಟ್ ಹಂತಕ್ಕೆ ಪ್ರವೇಶ ಪಡೆದಿವೆ. ಎ ಗುಂಪಿನಲ್ಲಿ ಆಸ್ಟ್ರೇಲಿಯ ಮತ್ತು ಉಜ್ಬೇಕಿಸ್ತಾನ್ ಭಾರತ ತಂಡಗಳೊಂದಿಗೆ ಕೋರಿಯಾ ಕೂಡ ಎ ಗುಂಪಿನ ಮೂಲಕ ನಾಕ್ ಔಟ್ ಹಂತಕ್ಕೆ ಪ್ರವೇಶ ಪಡೆಯಲಿದೆ.

ಮಲೇಷಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತದ ರಿಶಿಕಾ ಸುಂಕರಾ ಅವರು ಅಡೇಲಿ ಬೊಯ್‌ರನ್ನು 6-1, 6-1 ಸೆಟ್‌ಗಳ ಅಂತರದಿಂದ ಸೋಲಿಸಿದರೆ, ರಶ್ಮಿ ತೆಳತುಂಬೆ ಅವರು ಹ್ಯುಯ್ ತೆಂಗ್ ಸಿಯಾರನ್ನು 6-0, 6-2 ಸೆಟ್‌ಗಳ ಅಂತರದಿಂದ ಪರಾಭವಗೊಳಿಸಿದ್ದಾರೆ ಡಬಲ್ಸ್ ಪಂದ್ಯದಲ್ಲಿ ರತ್ನಿಕಾ ಬಾತ್ರಾ ಮತ್ತು ರಿಶಿಕಾ ಅವರು ಸಿಯಾ ಮತ್ತು ಸಿಯು ಮಿನ್ನ್‌ರನ್ನು 6-0, 6-4 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ