ಅಗ್ರ ಶ್ರೇಯಾಂಕಿತೆಗೆ ಸೋಲಿನ ಅನುಭವ

ಗುರುವಾರ, 20 ಸೆಪ್ಟಂಬರ್ 2007 (16:58 IST)
ಬಿರುಸಿನ ಸರ್ವ್ ಮತ್ತು ಮಿಂಚಿನ ಚಲನೆಯ ಅಮೆರಿಕದ ಟೆನಿಸ್ ಆಟಗಾರ್ತಿ ವನಿಯಾ ಕಿಂಗ್ ಅವರು ವಿಂಬಲ್ಡನ್ ರನ್ನರ್ಸ್ ಅಪ್ ಮಾರಿಯನ್ ಬಾರ್ತೋಲಿಯನ್ನು ಅಚ್ಚರಿಯ ರೀತಿಯಲ್ಲಿ ಸೋಲಿಸಿದ್ದಾರೆ.

ಅಂತಾರಾಷ್ಟ್ರೀಯ ಟೆನಿಸ್ ರಂಗಕ್ಕೆ ಇಳಿದ ಎರಡು ವರ್ಷಗಳಲ್ಲಿ ವನಿಯಾ ಕಿಂಗ್ ಗಮನಸೆಳೆಯುವ ಪ್ರದರ್ಶನ ನೀಡುತ್ತಿದ್ದಾರೆ.

ಪಂದ್ಯದ ನಂತರ ಮಾತನಾಡಿದ ವನಿಯಾ ಕಿಂಗ್ " ವೃತ್ತಿ ಪರ ಟೆನಿಸ್ ಪಟು ಅತಿ ಹೆಚ್ಚು ಪ್ರವಾಸ ಮಾಡಬೇಕಾಗುತ್ತದೆ ನಿರಂತರ ಪ್ರವಾಸ ದೆಹದ ಮೇಲೆ ವ್ಯತಿರಿಕ್ತ ಪರಿಣಾಮ ಬಿರುವುದು ಸಹಜ." ಬಾರ್ತೋಲಿ ವಿರುದ್ಧ ನಡೆದ ಮೊದಲ ಸುತ್ತಿನಲ್ಲಿ ವನಿಯಾ ಪೋರ್ ಹ್ಯಾಂಡ್ ಮತ್ತು ಅದ್ಬುತವಾದ ರೀತಿಯಲ್ಲಿ ಮೈದಾನವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು.

ವೆಬ್ದುನಿಯಾವನ್ನು ಓದಿ