ಅಥ್ಲೆಟಿಕ್ ಚಾಂಪಿಯನ್‌ಷಿಪ್‌: ಕರ್ನಾಟಕಕ್ಕೆ ಚಿನ್ನದ ಪದಕ

ಭಾನುವಾರ, 30 ಜೂನ್ 2013 (12:19 IST)
ಉತ್ತಮ ಪ್ರದರ್ಶನ ತೋರಿದ ಕರ್ನಾಟಕದ ಬಾದ್‌ಷಾಹ್ ಕೋಜಗೀರ್ (8:06.8 ಸೆ.) 34ನೇ ಮಾಸ್ಟರ್ಸ್ ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದ 80 ವರ್ಷಕ್ಕೂ ಮೇಲಿನವರ 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಬಂಗಾರದ ಸಾಧನೆ ಮಾಡಿದರೇ 90+ ವಿಭಾಗದ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಯೋಗಿ ತ್ರಿವಿಕ್ರಮ್ ದಾಸ್ (2:12.34ಸೆ.) ಚಿನ್ನ ಗೆದ್ದರು.

ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮೂರನೇ ದಿನದ ವಿವಿಧ ಸ್ಪರ್ಧೆಗಳಲ್ಲಿ ಕರ್ನಾಟಕ ನಾಲ್ಕು ಚಿನ್ನ, 7 ಬೆಳ್ಳಿ ಹಾಗೂ 11 ಕಂಚುಗಳನ್ನು ಗೆದಿದ್ದೆ.

ಪುರುಷರ ವಿಭಾಗ: 1500 ಮೀ. ಓಟದ ಸ್ಪರ್ಧೆಯಲ್ಲಿ ಚಿನ್ನ ಬಾಚಿದ್ದ ಬಾದ್‌ಷಹ್ 400 ಮೀ.ದೂರವನ್ನು 1:39.28 ನಿಮಿಷಗಳಲ್ಲಿ ಕ್ರಮಿಸಿ ಕಂಚಿಗೆ ತೃಪ್ತಿಪಟ್ಟರು. ವಿ.ಮಾರಪ್ಪ (65+, ಹೈಜಂಪ್, 1.41ಮೀ.) ಹಾಗೂ ವಿ.ದೀನ್ ದಯಾಳನ್ (60+, ಪೋಲ್‌ವಾಲ್ಟ್, 1.90ಮೀ) ಬೆಳ್ಳಿ ಜಯಿಸಿದರು. ಮೋಹನ್ ಬಿ. ನೇತ್ರೆಕರ್ (60+,1500ಮೀ, 6:25.3 ಸೆ.), ಪ್ರಮೋದ್ ಹರಿ ನಾಯ್ಕ (45+, ಡಿಸ್ಕಸ್ ಥ್ರೋ, 31.92 ಮೀ.), ಎಚ್.ಆರ್.ಶಂಕರ್ (50+, ಡಿಸ್ಕಸ್ ಥ್ರೋ, 34.24 ಮೀ.), ಎ.ಸಿ.ಸುಬ್ಬಯ್ಯ (55+, ಡಿಸ್ಕಸ್ ಥ್ರೋ, 30.50 ಮೀ.), ಕೆ.ಮಹಾಬಲ್ ಶೆಟ್ಟಿ (65+, ಡಿಸ್ಕಸ್ ಥ್ರೋ, 29.96 ಮೀ.), ಜೈರಾಜ್ (70+, ಪೋಲ್‌ವಾಲ್ಟ್,1.30 ಮೀ.) ಹಾಗೂ ಕೆ.ರಾಜ್ ಕುಮಾರ್ (45+, ಶಾಟ್‌ಪುಟ್,10.01 ಮೀ.) ಕಂಚಿಗೆ ತೃಪ್ತಿ ಪಟ್ಟಿದ್ದಾರೆ.

ಮಹಿಳೆಯ ವಿಭಾಗ: ಭವಾನಿ (55+, ಶಾಟ್‌ಪುಟ್, 8.91 ಮೀ.), ರೀತ್ ಅಬ್ರಹಾಂ (50+, ಟ್ರಿಪಲ್ ಜಂಪ್, 10.7 ಮೀ.) ಹಾಗೂ ಕಮಲಾ ಶ್ರೀನಿವಾಸನ್ (55+,400 ಮೀ, 1:27.84 ಸೆ.) ಚಿನ್ನ ಜಯಿಸಿದರೇ, ನೀರಾ ಕತ್ವಾಲ್ (35+,1500ಮೀ, 5:50.6 ಸೆ.), ಅನಿತಾ ಲೊಬೊ (45+,1500ಮೀ. 7:38.1 ಸೆ.), ಅರುಣಕಲಾ ಎಸ್ ರಾವ್ (60+, 1500ಮೀ.- 8:05.9 ಸೆ), ವಿಶಾಲಾಕ್ಷಿ ಎಸ್.ಎಂ. (50+, 400 ಮೀ 1:27.25 ಸೆ.) ಹಾಗೂ ಟಿ.ವಿ.ಲಲಿತಮ್ಮ (65+,1500ಮೀ,10:58.3 ಸೆ.) ಬೆಳ್ಳಿ ಬಾಚಿದರು. ಬಿ.ಸಿ.ಪಾರ್ವತಿ (55+,1500ಮೀ, 8:25.6 ಸೆ.), ಅಮಿಷಾ ಸರಿಕಾ ವಾಡ್ಕರ್ (40+,6:43.3ಸೆ.) ಹಾಗೂ ಬಿ.ಸಿ.ಪಾರ್ವತಿ (55+, 8:25.6 ಸೆ.) ಕಂಚಿಗೆ ತೃಪ್ತಿ ಪಟ್ಟರು.

ವೆಬ್ದುನಿಯಾವನ್ನು ಓದಿ