ಅಮೆರಿಕಾ ತಂಡದ ಜೊತೆ ಆಡುವೆ : ಕೇಶವನ್

ಸೋಮವಾರ, 29 ಜುಲೈ 2013 (20:18 IST)
PR
ರುಸಿಯ ಸೋಚಿ ಯಲ್ಲಿ ನಡೆಯಲಿರುವ ಚಳಿಗಾಲದ ಒಲಂಪಿಕ್ಸ್ ನಲ್ಲಿ ಭಾಗವಹಿಸುವ ಮೊದಲು ಭಾರತದ ಶಿವ ಕೇಶವನ್ ಅವರಿಗೆ ಅಮೆರಿಕದ ವಿಶ್ವಮಟ್ಟದ ರಾಷ್ಟೀಯ ಲೂಶ್ ಟೀಂ ಜೊತೆಗೆ ಅಭ್ಯಾಸ ಮಾಡುವ ಸುವರ್ಣ ಅವಕಾಶ ಸಿಕ್ಕಿದೆ.

ಯುರೋಪ್‌ನಲ್ಲಿ ಕೆಲ ಕಾಲ ಕಳೆದ ಸ್ವದೇಶಕ್ಕೆ ಮರಳುತ್ತಿರುವ ಸಂದರ್ಭದಲ್ಲಿ ಮಾತನಾಡಿದ ಕೇಶವನ್, ಸೋಚಿಯಲ್ಲಿ ನಡೆಯಲಿರುವ ಚಳಿಗಾಲದ ಒಲಂಪಿಕ್ಸ್ ನಲ್ಲಿ ಭಾಗವಹಿಸುವ ಮೊದಲು ಅಮೇರಿಕದ ಲುಶ್ ಟೀಂ ಜೊತೆಗೆ ಅಭ್ಯಾಸ ಮಾಡುತ್ತೇನೆ, ಆದರೆ ಇದಕ್ಕೂ ಮೊದಲು ಅವರ ಜೊತೆ ಕರಾರಿನ ಪತ್ರಕ್ಕೆ ಸಹಿ ಹಾಕುವ ಅಗತ್ಯವಿದೆ. ಚರ್ಚೆ ಮುಕ್ತಾಯದ ಹಂತಕ್ಕೆ ಬಂದಿದೆ. ಇವಾಗ ಕರಾರು ಪತ್ರಕ್ಕೆ ಸಹಿ ಹಾಕುವ ಅಂತಿಮ ಹಂತ ಉಳಿದಿದೆ ಎಂದು ಕೇಶವ್ ಹೇಳಿದರು .

ವೆಬ್ದುನಿಯಾವನ್ನು ಓದಿ