ಅಸಹ್ಯ ಪದ ಬಳಸಿದ ಅಭಿಮಾನಿಗಳ ವಿರುದ್ಧ ಜ್ವಾಲಾ ಕಿಡಿ

ಸೋಮವಾರ, 26 ಆಗಸ್ಟ್ 2013 (13:57 IST)
PTI
ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಐಬಿಎಲ್ ಪಂದ್ಯಾವಳಿಯಲ್ಲಿ ಕ್ರಿಶ್ ದೆಹಲಿ ಸ್ಮ್ಯಾಶರ್ಸ್ ತಂಡದ ಆಟಗಾರ್ತಿ ಜ್ವಾಲಾ ಗುಟ್ಟಾ ವಿರುದ್ಧ ಅಭಿಮಾನಿಗಳು ಅಸಹ್ಯ ಬಾಷೆಯನ್ನು ಬಳಸಿದ್ದರಿಂದ ಗುಟ್ಟಾ ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕ್ರಿಶ್ ದೆಹಲಿ ಸ್ಮ್ಯಾಶರ್ಸ್ ತಂಡದ ಆಟಗಾರ್ತಿ 29 ವರ್ಷ ವಯಸ್ಸಿನ ಜ್ವಾಲಾ ಗುಟ್ಟಾ ತಮ್ಮ ಜೊತೆಗಾರ ಡಿ.ವಿಜು ಅವರೊಂದಿಗೆ ಮಿಶ್ರ ಡಬಲ್ಸ್ ಪಂದ್ಯದಲ್ಲಿ ತಮ್ಮ ಎದುರಾಳಿ ಬಂಗಾ ಬೀಟ್ಸ್ ವಿರುದ್ಧ ಸೆಣಸಾಟ ನಡೆಸುತ್ತಿರುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎಂದು ತಂಡದ ಮೂಲಗಳು ತಿಳಿಸಿವೆ.

ಕೆಲ ಪ್ರೇಕ್ಷಕರು ಜ್ವಾಲ ಗುಟ್ಟಾ ವಿರುದ್ಧ ವೈಯಕ್ತಿಕ ಆರೋಪಗಳನ್ನು ಮಾಡಿದ್ದರಿಂದ ಗುಟ್ಟಾ ತುಂಬಾ ಕೋಪೋದ್ರಿಕ್ತರಾಗಿದ್ದರು ದೆಹಲಿ ತಂಡ ಅಸಮಾಧಾನ ವ್ಯಕ್ತಪಡಿಸಿದೆ.

ಪಂದ್ಯದ ನಂತರ ಜ್ವಾಲಾ ಗುಟ್ಟಾ ಕೋಪದ ಭರದಲ್ಲಿ ಕೆಲ ಅಧಿಕಾರಿಗಳೊಂದಿಗೆ ಬಿಸಿ ಬಿಸಿ ವಾಗ್ವಾದ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ