ಆಸ್ಟ್ರೇಲಿಯನ್ ಓಪನ್‌‌ನಲ್ಲಿ ಉತ್ತಮ ಪ್ರದರ್ಶನ :ಸಾನಿಯಾ

ಮಂಗಳವಾರ, 21 ಡಿಸೆಂಬರ್ 2010 (17:34 IST)
PTI
ದುಬೈನಲ್ಲಿ ನಡೆದ ಐಟಿಎಫ್‌ ಪಂದ್ಯಾವಳಿಯಲ್ಲಿ ಜಯಗಳಿಸಿದ ಸಾನಿಯಾ ಮಿರ್ಜಾ, ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ವಿಶ್ವ ಟೆನಿಸ್ ಶ್ರೇಯಾಂಕದಲ್ಲಿ 164ನೇ ಸ್ಥಾನವನ್ನು ಹೊಂದಿರುವ 24 ವರ್ಷ ವಯಸ್ಸಿನ ಸಾನಿಯಾ,ದುಬೈನಲ್ಲಿ ನಡೆದ ಹಬ್‌ತೂರ್ ಟೆನಿಸ್ ಚಾಲೆಂಜ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಸೆರ್ಬಿಯಾದ ಎದುರಾಳಿ ಬೊಜನಾ ಜೊವಾನೊವಿಸ್ಕಿ ವಿರುದ್ಧ 4-6 6-3 6-0 ಸೆಟ್‌‌ಗಳಿಂದ ಸೋಲಿಸಿ,75000 ಡಾಲರ್ ನಗದು ಬಹುಮಾನ ಪಡೆದಿದ್ದಾರೆ.

ಪಂದ್ಯಾವಳಿಯ ಗೆಲುವಿನಿಂದ ನಿಜವಾಗಿ ತೃಪ್ತಿ ತಂದಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದೇನೆ.ಆಸ್ಟ್ರೇಲಿಯಾ ಓಪನ್ ಪಂದ್ಯಾವಳಿಯಲ್ಲಿ ಜಯಗಳಿಸಿದಲ್ಲಿ ಆತ್ಮವಿಶ್ವಾಸ ಮತ್ತಷ್ಟು ವೃದ್ಧಿಯಾಗಲಿದೆ ಎಂದು ಸಾನಿಯಾ ತಿಳಿಸಿದ್ದಾರೆ.

ಡಬ್ಲುಟಿಎ ಪಂದ್ಯಾವಲಿಗಳ ಮಧ್ಯೆ ಐಟಿಎಫ್ ಪಂದ್ಯಾವಳಿಗಳಲ್ಲಿ ಭಾಗವಹಿಸುವುದು ಸೂಕ್ತವಲ್ಲ ಎನ್ನುವ ಹೇಳಿಕೆಯನ್ನು ಸಾನಿಯಾ ತಿರಸ್ಕರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ