ಇಂಡಿಯನ್ ಓಪನ್: ಭಾರತೀಯ ಆಟಗಾರರ ಸವಾಲು ಅಂತ್ಯ

ಶನಿವಾರ, 30 ಏಪ್ರಿಲ್ 2011 (14:44 IST)
PTI
ಇಂಡಿಯನ್ ಓಪನ್ ಸೂಪರ್ ಸರಣಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ, ಗುರುಸಾಯಿದತ್ತ್ ಮತ್ತು ಸೌರಭ್ ವರ್ಮಾಸೋಲನುಭವಿಸುವುದರೊಂದಿಗೆ ಭಾರತದ ಸವಾಲು ಅಂತ್ಯಗೊಂಡಂತಾಗಿದೆ.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗುರುಸಾಯಿದತ್ ತಮ್ಮ ಹಾಂಗ್‌ಕಾಂಗ್ ಎದುರಾಳಿ ಹುಯಾನ್ ವಿರುದ್ಧ ಸೋಲನುಭವಿಸಿದರೇ ಸೌರಭ್ ವರ್ಮಾ ಮಲೇಷ್ಯಾದ ಎದುರಾಳಿ ಲಿ ಚೊಂಗ್ ವೈ ವಿರುದ್ಧ ಸೋಲನುಭವಿಸಿ ಪಂದ್ಯಾವಳಿಯಿಂದ ನಿರ್ಗಮಿಸಿದರು.

ಸೈನಾ ನೆಹ್ವಾಲ್, ಜ್ವಾಲಾ ಗುಟ್ಟಾ ಮತ್ತು ಅಶ್ನಿನಿ ಪೊನ್ನಪ್ಪ ಸೋಲನುಭವಿಸಿ ಪಂದ್ಯಾವಳಿಯಿಂದ ನಿರ್ಗಮಿಸಿದ ನಂತರ, ಪ್ರೇಕ್ಷಕರು ಇದೀಗ ವಿಶ್ವದ ಮೂರನೇ ಶ್ರೇಯಾಂಕದಲ್ಲಿರುವ ತೌಫಿಕ್ ಹಿದಾಯತ್ ಪರ ವಾಲಿದ್ದಾರೆ.

ತೌಫಿಕ್ ಹಿದಾಯತ್ ಮುಂದಿನ ಪಂದ್ಯದಲ್ಲಿ ಕೊರಿಯಾದ ಪಾರ್ಕ್ ಸುಂಗ್ ಹವಾನ್ ವಿರುದ್ಧ ಹಣಾಹಣಿ ನಡೆಸಲಿದ್ದಾರೆ. ಪಾರ್ಕ್, ಚೀನಾದ ಅಗ್ರಶ್ರೇಯಾಂಕಿತ ಆಟಗಾರ ಲಿನ್ ಡಾನ್ ಅವರನ್ನು ಸೋಲಿಸಿದ ಖ್ಯಾತಿಯನ್ನು ಹೊಂದಿದ್ದಾರೆ.

ವೆಬ್ದುನಿಯಾವನ್ನು ಓದಿ