ಇಂಡಿಯಾ ಓಪನ್‌ ಸ್ನೂಕರ್‌: ಭಾರತೀಯ ಕ್ರೀಡಾಪಟು ಫೈನಲ್‌ಗೆ

ಶನಿವಾರ, 19 ಅಕ್ಟೋಬರ್ 2013 (16:18 IST)
PTI
ಅಪೂರ್ವ ಪ್ರದರ್ಶನದ ಮೂಲಕ ಗಮನ ಸೆಳೆದ ಭಾರತದ ಆದಿತ್ಯ ಮೆಹ್ತಾ ಇಲ್ಲಿ ನಡೆಯುತ್ತಿರುವ ಇಂಡಿಯಾ ಓಪನ್‌ ವಿಶ್ವ ರ್‍ಯಾಂಕಿಂಗ್‌ ಸ್ನೂಕರ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆಗೆ ಕಾರಣರಾದರು.

ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕದ ಪಂಕಜ್‌ ಅಡ್ವಾಣಿ ಅವರನ್ನು ಸೋಲಿಸಿ ಆದಿತ್ಯ ವಿಶ್ವಾಸ ಹೆಚ್ಚಿಸಿಕೊಂಡಿದ್ದರು. ಶುಕ್ರವಾರ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಭಾರತದ ಆಟಗಾರ 4-3 (84-0, 137-0, 132-132-0, 0-72, 10-53, 6-67, 67-45)ರಲ್ಲಿ ವಿಶ್ವ ರ್‍ಯಾಂಕ್‌ನಲ್ಲಿ ಐದನೇ ಸ್ಥಾನ ಹೊಂದಿರುವ ಸ್ಕಾಟ್ಲೆಂಡ್‌ನ ಸ್ಟೀಫನ್‌ ಮಗೂರಿಯ ಎದುರು ಅಚ್ಚರಿಯ ಗೆಲುವು ಪಡೆದರು. ಈ ಮೂಲಕ ಆದಿತ್ಯ ವೃತ್ತಿಪರ ಸ್ನೂಕರ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ ಮೊದಲ ಭಾರತೀಯ ಎನ್ನುವ ಗೌರವಕ್ಕೂ ಪಾತ್ರರಾದರು.

ಈಪಂದ್ಯ ಮೂರು ಗಂಟೆಗೂ ಅಧಿಕ ಕಾಲ ನಡೆಯಿತು

ಮೊದಲ ಸುತ್ತಿನ ಪಂದ್ಯದಲ್ಲಿ ಆದಿತ್ಯ ಎರಡು ಬಾರಿ ವಿಶ್ವ ಚಾಂಪಿಯನ್‌ ಇಂಗ್ಲೆಂಡ್‌ನ ಪೀಟರ್‌ ಎಡ್ಬನ್‌ ಅವರನ್ನು ಮಣಿಸಿದ್ದರು. 27 ವರ್ಷದ ಮುಂಬೈನ ಆಟಗಾರ ಮಾರ್ಕ್‌ ವಿಲಿಮ್ಸನ್‌ ಅವರನ್ನೂ ಸೋಲಿಸಿದ್ದರು.

ಇನ್ನೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ಚೀನಾದ ಡಿಂಗ್‌ ಜಾಹ್ನಿಯಿ 4-1 (111-0, 90-11, 146 -0, 0-87, 76 -28ರಲ್ಲಿ ಇಂಗ್ಲೆಂಡ್‌ನ ರಾಬಿ ವಿಲಿಯಮ್ಸ್‌ ಎದುರು ಜಯ ಪಡೆದರು. ಫೈನಲ್‌ ಸೆಣಸಾಟದಲ್ಲಿ ಆದಿತ್ಯ ಮತ್ತು ಡಿಂಗ್‌ ಪೈಪೋಟಿ ನಡೆಸಲಿದ್ದಾರೆ.

ವೆಬ್ದುನಿಯಾವನ್ನು ಓದಿ