ಈ ಸಲ ನಂಬರ್‌ಒನ್‌ ಸ್ಥಾನ ಪಡೆದ ನಡಾಲ್‌

ಶುಕ್ರವಾರ, 8 ನವೆಂಬರ್ 2013 (16:05 IST)
PR
ಎಟಿಪಿ ವರ್ಲ್ಡ್‌ ಟೂರ್‌‌ ಫೈನಲ್‌ ಪಂದ್ಯದಲ್ಲಿ ಪುರುಷ ಸಿಂಗಲ್ಸ್‌ನಲ್ಲಿ ವಿಶ್ವದ ನಂಬರ್‌ ಓನ್‌ ಆಟಗಾರ ಸ್ಪೇನ್‌ ದೇಶದ ರಫೇಲ್‌ ನಡಾಲ್‌ ತಮ್ಮ ಎದುರಾಳಿಯಾದ ಸ್ವಿರ್ಡ್ಜಲ್ಯಾಂಡ್‌ ದೇಶದ ಸ್ಟಾನ್ಸಿಸ್ಲಾಸ್ ವಾವರಿಂಕಾರನ್ನು ಸೋಲಿಸುವುದರ ಮೂಲಕ ಈ ವರ್ಷವೂ ಕೂಡ ನಂಬರ್‌ ಒನ್‌ ಸ್ಥಾನ ಪಡೆದುಕೊಳ್ಳುವ ಭರವಸೆ ನೀಡಿದ್ದಾರೆ.

ಏಳು ತಿಂಗಳುಗಳ ಕಾಲ ಗಾಯದಿಂದ ಪಂದ್ಯಾವಳಿಗಳಿಂದ ದೂರ ಉಳಿದ ನಡಾಲ್‌, ಫೆಬ್ರುವರಿಯಲ್ಲಿ ಮತ್ತೆ ಆಡಲು ಶುರುಮಾಡಿ ಗೆಲುವಿನ ಕುದುರೆ ಎರಿದರು. ಎಟಿಪಿ ಟೂರ್‌ ಫೈನಲ್ಸ್‌ನಲ್ಲಿ ನಡಾಲ್ ಗ್ರೂಪ್‌ ಎ ಸ್ಪರ್ದೆಯಲ್ಲಿ ಏಳನೇ ಶ್ರೇಯಾಂಕಿತ ವಾವರಿಂಕಾರವರನ್ನು 7-6, 7-6 ಅಂತರದಿಂದ ಸೋಲಿಸಿದ್ದಾರೆ. ಇದಕ್ಕು 24 ಗಂಟೆಗಳ ಮೊದಲು ನಡಾಲ್‌ ತಮ್ಮ ಎದುರಾಳಿ ಹಮವತನ ಡೆವಿಡ್‌ ಫೆರರ್ವರನ್ನು ಸೋಲಿಸಿದ್ದರು.

ಈ ಗೆಲುವಿನ ಮೂಲಕ ಗ್ರೂಪ್‌ ಎ ನಲ್ಲಿ ನಡಾಲ್‌ ಉತ್ತಮ ಪ್ರದರ್ಶನ ನೀಡುವುದರ ಮೂಲಕ 4 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಉಳಿದುಕೊಂಡಿದ್ದಾರೆ ಹಾಗೆನೇ ವಾವರಿಂಕಾ 2 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿ ಉಳಿದುಕೊಂಡಿದ್ದಾರೆ. ಇವರ ಹೊರತು ಗ್ರೂಪ್‌ ಎ ನಲ್ಲಿ ಒಂದು ಸ್ಪರ್ದೆಯಲ್ಲಿ ಐದನೇ ಶ್ರೇಯಾಂಕಿತ ಚೆಕ್‌ ಗಣರಾಜ್ಯದ ಥಾಮಸ್‌ ಬೆದ್ರಿಚ್‌ ತಮ್ಮ ಎದುರಾಳಿಯಾದ ಮಮೂರನೆ ಶ್ರೇಯಾಂಕಿತ ಸ್ಪೇನ್‌ ದೇಶದ ಡೆವಿಡ್‌ ಫೆರರ್ರನ್ನು 6-4, 6-4 ಅಂತರದಿಂದ ಸೋಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ