ಎಂಟರ ಘಟ್ಟಕ್ಕೆ ಬೋಪಣ್ಣ-ಖುರೇಷಿ; ಸಾನಿಯಾ ಅಭಿಯಾನ ಅಂತ್ಯ

ಬುಧವಾರ, 7 ಸೆಪ್ಟಂಬರ್ 2011 (15:58 IST)
ಇಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಅಮೆರಿಕನ್ ಓಪನ್ ಟೆನಿಸ್ ಟೂರ್ನಮೆಂಟ್‌ನ ಕ್ವಾರ್ಟರ್ ಫೈನಲ್‌ಗೆ ಭಾರತದ ರೋಹನ್ ಬೋಪಣ್ಣ ಹಾಗೂ ಪಾಕಿಸ್ತಾನ ಹಾಶೀಮ್ ಉಲ್ ಹಕ್ ಖುರೇಷಿ ಪ್ರವೇಶಿಸಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಮತ್ತೊಂದೆಡೆ ಭಾರತದ ಮಹಿಳಾ ಆಟಗಾರ್ತಿ ಸಾನಿಯಾ ಮಿರ್ಜಾ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸೋಲುವುದರೊಂದಿಗೆ ತಮ್ಮ ಅಭಿಯಾನವನ್ನು ಕೊನೆಗೊಳಿಸಿದರು.

ಟೂರ್ನಿಯಲ್ಲಿ ಐದನೇ ಶ್ರೇಯಾಂಕಿತರಾಗಿರುವ ಇಂಡೋ-ಪಾಕ್ ಎಕ್ಸ್‌ಪ್ರೆಸ್ ಖ್ಯಾತಿಯ ಬೋಪಣ್ಣ ಹಾಗೂ ಖುರೇಷಿ ಜೋಡಿ ಆಸ್ಟ್ರೇಲಿಯಾದ ಪಾಲ್ ಹಾನ್ಲಿ ಮತ್ತು ಬೆಲ್ಜಿಯಂನ ಡಿಕ್ ನಾರ್ಮನ್ ಜೋಡಿರನ್ನು 6-2, 6-3ರ ಸುಲಭ ಅಂತರದಲ್ಲಿ ಮಣಿಸಿ ಮುನ್ನಡೆದರು.

ಸೆಮಿಗಾಗಿನ ಹಣಾಹಣಿಯಲ್ಲಿ ಬೋಪಣ್ಣ-ಖುರೇಷಿ ಜೋಡಿ ಬ್ರಿಟನ್‌ನ ಕಾಲಿನ್ ಫ್ಲೆಮಿಂಗ್ ಹಾಗೂ ರಾಸ್ ಹಚ್ಚಿನ್ ಜೋಡಿರನ್ನು ಎದುರಿಸಲಿದ್ದಾರೆ.

ಮತ್ತೊಂದೆಡೆ ಸಾನಿಯಾ ಮತ್ತು ಆಕೆಯ ರಷ್ಯಾ ಜತೆಗಾರ್ತಿ ಎಲೆನಾ ವೆಸ್ನಿನಾ ಜೋಡಿ ಚೆಕ್ ಗಣರಾಜ್ಯ ಇವೆಟಾ ಬೆನೆಸೋವಾ ಮತ್ತು ಬರ್ಬಾರಾ ಜಹ್ಲಾವೋವಾ ಸ್ಟೈಕೋವಾ ವಿರುದ್ಧ ಕಠಿಣ ಹೋರಾಟ ಪ್ರದರ್ಶಿಸಿದರೂ ಅಂತಿಮವಾಗಿ 6-7 (4), 6-7 (5)ರ ಅಂತರದಲ್ಲಿ ನಿರಾಸೆ ಅನುಭವಿಸಿದರು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ