ಐಟಿಎಫ್: ಫೈನಲ್‌ನಲ್ಲಿ ವಿಷ್ಣುವರ್ಧನ್, ಜೀವನ್ ಹಣಾಹಣಿ

ಶನಿವಾರ, 19 ನವೆಂಬರ್ 2011 (12:32 IST)
PTI
ಐಟಿಎಫ್ ಮೆನ್ಸ್ ಫ್ಯೂಚರ್ಸ್ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ ಮೂರನೇ ಶ್ರೇಯಾಂಕಿತ ಆಟಗಾರ ವಿಷ್ಣುವರ್ಧನ್ ತಮ್ಮ ಎದುರಾಳಿ ಯೂಕಿ ಭಾಂಭ್ರಿ ವಿರುದ್ಧ ಜಯಗಳಿಸಿ ಫೈನಲ್ ಹಂತವನ್ನು ಪ್ರವೇಶಿಸಿದ್ದಾರೆ.

ವಿಷ್ಣುವರ್ಧನ್, ಫೈನಲ್ ಪಂದ್ಯದಲ್ಲಿ ಜೀವನ್ ನೆಂಡುಂಚಿಯಾನ್ ವಿರುದ್ಧ ಹಣಾಹಣಿ ನಡೆಸಲಿದ್ದಾರೆ ಎಂದು ಆಯೋಜಕ ಅಧಿಕಾರಿಗಳು ತಿಳಿಸಿದ್ದಾರೆ.

ವಿಷ್ಣುವರ್ಧನ್ ಮತ್ತು ಭಾಂಭ್ರಿ ಮಧ್ಯದ ಸೆಮಿಫೈನಲ್ ಪಂದ್ಯ ಸುಮಾರು ಮೂರು ಗಂಟೆಗಳ ಕಾಲ ನಡೆದು ಪ್ರೇಕ್ಷಕರಿಗೆ ರೋಚಕ ಮನೋರಂಜನೆ ಒದಗಿಸಿತು. ಆದರೆ, ಅದೃಷ್ಟ ವಿಷ್ಣುವರ್ಧನ್ ಪರವಾಗಿದ್ದರಿಂದ ಅಂತಿಮವಾಗಿ 2-6, 7-6(5), 7-5 ಸೆಟ್‌ಗಳ ಅಂತರದಿಂದ ಜಯಗಳಿಸಿದರು.

ಜೀವನ್, ಸೆಮಿಫೈನಲ್ ಪಂದ್ಯದಲ್ಲಿ ಎದುರಾಳಿ ರಂಜಿತ್ ವಿರಾಲಿ ಭುಜದ ನೋವನಿಂದಾಗಿ ನಿವೃತ್ತಿ ಹೊಂದಿದ್ದರಿಂದ ಸುಲಭವಾಗಿ ಫೈನಲ್ ಪ್ರವೇಶಿಸಿದ್ದಾರೆ.

ಡಬಲ್ಸ್ ವಿಭಾಗದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಸಾಟೆಶ್ಕೋ ಮತ್ತು ರೋಹಣ್ ಗಜ್ಜರ್ ಜೋಡಿ, ತಮ್ಮ ಎದುರಾಳಿ ಜೋಡಿ ವಿಷ್ಣುವರ್ಧನ್ ಮತ್ತು ಕರಣ್ ರಸ್ತೋಗಿ ವಿರುದ್ಧ ಜಯಗಳಿಸಿ ಪ್ರಶಸ್ತಿ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ