ಐಬಿಎಲ್‍ನಿಂದ ಬಾರತಿಯ ಆಟಗಾರರಿಗೆ ಲಾಭವಾಗಲಿದೆ: ಅಪರ್ಣಾ ಪೊಪಟ್

ಮಂಗಳವಾರ, 30 ಜುಲೈ 2013 (17:27 IST)
PR
ಐಬಿಎಲ್ ಆರಂಭದಿಂದಾಗಿ ದೇಶದ ಬ್ಯಾಡ್ಮಿಂಟನ್ ಆಟಗಾರರಿಗೆ ಲಾಭವಾಗಲಿದೆ ಎಂದು ಐಬಿಎಲ್ ಮುಂಬೈ ಪ್ರ್ಯಾಂಚೆಸ್ಸಿಯ ಕೋಚ್ ಮತ್ತು ಒಲಂಪಿಕ್‌ನಲ್ಲಿ ಭಾಗವಹಿಸಿದ್ದ ಬ್ಯಾಡ್ಮಿಂಟನ್ ಆಟಗಾರ್ತಿ ಅಪರ್ಣಾ ಪೊಪಟ್ ಅವರು ಹೇಳಿದರು.

ಇದೊಂದು ಅದ್ಭುತ ಅವಕಾಶವಾಗಿದೆ. ಇದರಲ್ಲಿ 10 ಅಗ್ರ ಕ್ರಮಾಂಕದ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಮೂರು ವಾರದವರೆಗೆ ನಡೆಯಲಿರುವ ಪಂದ್ಯಾವಳಿಯಲ್ಲಿ ಅಗ್ರ ಶ್ರೇಯಾಂಕಿತ ಆಟಗಾರರ ವಿರುದ್ಧ ಆಡುವ ಅವಕಾಶ ಶ್ರೇಯಾಂಕರಹಿತ ಆಟಗಾರರಿಗೆ ದೊರೆಯುವುದರಿಂದ ಲಾಭವಾಗಲಿದೆ ಎಂದರು.

ಆಗಸ್ಟ್ 14 ರಿಂದ 31 ರವರೆಗೆ ನಡೆಯುವ ಪಂದ್ಯಾವಳಿಯಲ್ಲಿ ಒಂದು ತಂಡಕ್ಕೆ ತರಬೇತಿ ನೀಡುವ ಸವಾಲಿನಿಂದಾಗಿ ಉತ್ಸುಕರಾಗಿದ್ದಾರೆ. ನಾನು ಹೆಚ್ಚಿನ ತರಬೇತಿ ನೀಡಿಲ್ಲ ಈ ತರಬೇತಿ ನನಗೆ ಪ್ರಮುಖ ಸವಾಲಾಗಿರುವುದರಿಂದ ನಾನು ಬಹಳಷ್ಟು ಉತ್ಸುಕನಾಗಿದ್ದೆನೆ. ಇದೊಂದು ತಂಡದ ಸ್ಪರ್ಧೆಯಾಗಿರುವುದರಿಂದ ರಣತಂತ್ರ ಹೆಣೆಯಲು ಹೆಚ್ಚಿನ ಸಮಯ ಅಗತ್ಯವಾಗಿದೆ ಎಂದು ಅಪರ್ಣಾ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ