ಕನ್ನಡದ ಜೋತ್ಯಿಗೆ ಬೆಳ್ಳಿ ಪದಕ

ಸೋಮವಾರ, 9 ಸೆಪ್ಟಂಬರ್ 2013 (16:37 IST)
PR
ರಾಂಚಿಯಲ್ಲಿ ನಡೆಯುತ್ತಿರುವ 53 ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಚಾಂಪಿಯನ್‌ಷಿಪ್‌‌ನಲ್ಲಿ ಕರ್ನಾಟಕದ ಎಚ್.ಎಂ.ಜ್ಯೋತಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.

ಮಹಿಳಾ ವಿಭಾಗದ 100 ಮೀಟರ್ ಓಟದ ಸ್ಪರ್ದೆಯಲ್ಲಿ ಎಚ್.ಎಂ.ಜ್ಯೋತಿ ಕೇವಲ 11.87 ಸೆಕೆಂಡ್ ಗಳಲ್ಲಿ ಗುರಿಯನ್ನು ತಲುಪಿ ಬೆಳ್ಳಿ ಪದಕ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಒಎನ್‌ಜಿಸಿಯ ಧ್ಯುತಿ ಚಂದ್‌ 11.73 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದಪದಕ ಪಡೆದರು . ಹಾಗೆನೆ ರೈಲ್ವೆಯ ಮರ್ಲಿನ್‌ ಕೆ. ಜೋಸೆಫ್‌ 11.95 ಸೆಕೆಂಡುಗಳಲ್ಲಿ ಗುರಿಯನ್ನು ತಲುಪಿ ಕಂಚಿನ ಪದಕ ಪಡೆದರು.

ವೆಬ್ದುನಿಯಾವನ್ನು ಓದಿ