ಕಬಡ್ಡಿ ವಿಶ್ವಕಪ್‌ : ಪ್ರಿಯಾಂಕಾ ಛೋಪ್ರಾ ಮಾಡಲಿದ್ದಾರೆ ಕಮಾಲ್‌

ಶನಿವಾರ, 23 ನವೆಂಬರ್ 2013 (16:51 IST)
PR
ಪಂಜಾಬ್‌ನ ಬಟಿಂದಾನಲ್ಲಿ ಇದೇ ತಿಂಗಳು 30 ರಂದು ನಡೆಯಲಿರುವ ಕಬಡ್ಡಿ ಸ್ಪರ್ದೆಯ ಉಧ್ಘಾಟನಾ ಸಮಾರಂಭದಲ್ಲಿ ಬಾಲಿವುಡ್‌‌ನ ನಟಿ ಪ್ರಿಯಾಂಕ ಛೋಪ್ರಾ.ಮಿಂಚಲಿದ್ದಾರೆ

ಪಂಜಾಬ್‌ನ ಶಿಕ್ಷಣ ಮಂತ್ರಿ ಮತ್ತು ಕಬಡ್ಡಿ ವಿಶ್ವಕಪ್‌ ಆಯೋಜನಾ ಸಮಿತಿಯ ಉಪಾಧ್ಯಕ್ಷ ಸಿಕಿಂದರ್ ಸಿಂಗ್‌‌ ಮಲೂಕಾ ಈ ವಿಷುಯವನ್ನು ಘೋಷಣೆ ಮಾಡಿದ್ದಾರೆ. ಕಬಡ್ಡಿ ವಿಶ್ವಕಪ್‌ನ ಒಪನಿಂಗ್‌ ಸೆರೆಮನಿ ನವೆಂಬರ್‌‌ 30 ರಂದು ಭಟಿಂಡಾನಲ್ಲಿ ಆಯೋಜಿಸಲಾಗುವುದು ಮತ್ತು ಡಿಸೆಂಬರ್‌ 14 ರಂದು ಲೂಧೀಯಾನದ ಗುರು ನಾನಕ ಸ್ಟೇಡಿಯಂನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಸಿಕಿಂದರ್ ಸಿಂಗ್‌ ತಿಳಿಸಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್‌ನ ನಟಿ ಪ್ರಿಯಾಂಕಾ ಛೋಪ್ರಾ ತಮ್ಮ ಪ್ರದರ್ಶನ ನೀಡಲಿದ್ದಾರೆ ಆದರೆ ಸಮಾರೋಪ ಸಮಾರಂಭದಲ್ಲಿ ಪ್ರದರ್ಶನ ನೀಡುವರು ಯಾರು ಎಂದು ಇನ್ನು ನಿರ್ಧಾರವಾಗಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ