ಕಾಮನ್‌ವೆಲ್ತ್:ಭಾರತೀಯ ಕ್ರೀಡಾಪಟುಗಳಿಗೆ 'ಸೂಪರ್ ಸಂಡೇ'

ಸೋಮವಾರ, 11 ಅಕ್ಟೋಬರ್ 2010 (12:32 IST)
ಕಾಮನ್‌ವೆಲ್ತ್ ಗೇಮ್ಸ್ ಪಂದ್ಯಾವಳಿ ಆರಂಭವಾದ ಏಳನೇ ದಿನದಂದು 15 ಪದಕಗಳನ್ನು ಭಾರತೀಯ ಕ್ರೀಡಾಪಟುಗಳು ಗೆಲ್ಲುವ ಮೂಲಕ 'ಸೂಪರ್‌ ಸಂಡೇ' ಆಚರಿಸಿದ್ದಾರೆ.

ಅರ್ಚರಿ ವಿಭಾಗದಲ್ಲಿ ಎರಡು ಚಿನ್ನದ ಪದಕ ಹಾಗೂ ಕುಸ್ತಿ ಮತ್ತು ಟೆನಿಸ್ ವಿಭಾಗದಲ್ಲಿ ಪಡೆದ ಚಿನ್ನದ ಪದಕಗಳಿಂದಾಗಿ, ಭಾರತದ ಚಿನ್ನದ ಪದಕಗಳ ಪಟ್ಟಿ 29ಕ್ಕೆ ಏರಿಕೆಯಾಗಿದೆ.ಕಳೆದ ಎಂಟು ವರ್ಷಗಳ ಹಿಂದೆ ಮ್ಯಾಂಚೆಸ್ಟರ್‌ ಕಾಮನ್‌ವೆಲ್ತ್‌ನಲ್ಲಿ ಭಾರತ 30 ಚಿನ್ನದ ಪದಕಗಳನ್ನು ಪಡೆದಿತ್ತು.

ಭಾರತದ ಪದಕಗಳ ಪಟ್ಟಿಯಲ್ಲಿ 29 ಚಿನ್ನ, 22 ಬೆಳ್ಳಿ ಮತ್ತು 22 ಕಂಚಿನ ಪದಕಗಳನ್ನು ಪಡೆದು ಒಟ್ಟು 73 ಪದಕಗಳನ್ನು ಪಡೆದಂತಾಗಿದೆ. ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ 60 ಚಿನ್ನ, 36 ಬೆಳ್ಳಿ ಮತ್ತು 35 ಕಂಚಿನ ಪದಕಗಳನ್ನು ಪಡೆದಿದೆ. ಇಂಗ್ಲೆಂಡ್ 25-45-30 ಪದಕಗಳನ್ನು ಪಡೆದು ಮೂರನೇ ಸ್ಥಾನದಲ್ಲಿದೆ.

ರಾಂಚಿಯ ರಿಕ್ಷಾ ಚಾಲಕನ ಮಗಳಾದ 16 ವರ್ಷ ವಯಸ್ಸಿನ ದೀಪಿಕಾ ಕುಮಾರಿ, ವ್ಯಯಕ್ತಿಕ ಅರ್ಚರಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮೆರೆದಿದ್ದಾರೆ.

ರಾಹುಲ್ ಬ್ಯಾನರ್ಜಿ ಕೂಡಾ ವೈಯಕ್ತಿಕ ಅರ್ಚರಿ ವಿಭಾಗದಲ್ಲಿ ಚಿನ್ನದ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಜಯಂತಾ ತಾಲೂಕ್‌ದಾರ್ ಮತ್ತು ಡೋಲಾ ಬ್ಯಾನರ್ಜಿ ಕ್ರಮವಾಗಿ ಕಂಚಿನ ಪದಕ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ