ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಸ್ಪರ್ದೆ: ಭಾರತಕ್ಕೆ ಪದಕಗಳ ಶತಕ

ಶನಿವಾರ, 30 ನವೆಂಬರ್ 2013 (14:43 IST)
PR
ಮಲೇಷಿಯಾದ ಪೆನಾಂಗ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಜ್ಯೂನಿಯರ್‌ ಮತ್ತು ಸೀನಿಯರ್‌ ಭಾರಎತ್ತುವ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುವುದರ ಜೊತೆಗೆ ಒಟ್ಟು 102 ಪದಕಗಳನ್ನು ಪಡೆದಿದ್ದಾರೆ .ಇವುಗಳಲ್ಲಿ 53 ಸ್ವರ್ಣ ಪದಕಗಳಾಗಿವೆ.

ಯುವ ವಿಭಾಗದ ಬಾಲಕರ ಸ್ಪರ್ದೆಯಲ್ಲಿ ಭಾರತ ಅತಿ ಹೆಚ್ಚಿನ ಪದಕಗಳನ್ನು ಪಡೆದಿದೆ. ಭಾರತ ಈ ಸ್ಪರ್ದೆಯಲ್ಲಿ 16 ಸ್ವರ್ಣ ಪದಕ ಸಹಿತ ಒಟ್ಟು 24 ಪದಕ ಯುವ ವಿಭಾಗದಲ್ಲಿ ಪಡೆದಿದೆ.

ಯುವ ವನಿತೆಯರ ಸ್ಪರ್ದೆಯಲ್ಲಿ ಭಾರತ 12 ಸ್ವರ್ಣ ಪದಕ ಸಹಿತ 21 ಪದಕಗಳನ್ನು ಪಡೆದಿದೆ. ಸೀನಿಯರ್‌ ಪುರುಷ ವಿಭಾಗದಲ್ಲಿ ಮತ್ತು ಮಹಿಳಾ ವಿಭಾಗದಲ್ಲಿ 21 ಪದಕಗಳನ್ನು ಪಡೆದಿದೆ, ಇದರಲ್ಲಿ 9 ಸ್ವರ್ಣ ಪದಕಗಳು ಸೇರಿವೆ . ಈ ಮೂಲಕ ಭಾರತ ಶತಕ ಪದಕಗಳನ್ನು ಪಡೆದು ಹೊಸ ಇತಿಹಾಸ ನಿರ್ಮಿಸಿದೆ.

ವೆಬ್ದುನಿಯಾವನ್ನು ಓದಿ