ಕೂಯಾಂಗ್ ಕ್ಲ್ಯಾಸಿಕ್ ಓಪನ್‌ನಲ್ಲಿ ಉತ್ತಮ ಪ್ರದರ್ಶನ:ಹೆವಿಟ್

ಸೋಮವಾರ, 6 ಡಿಸೆಂಬರ್ 2010 (18:00 IST)
ಗಾಯದಿಂದ ಬಳಲುತ್ತಿರುವ ಆಸ್ಟ್ರೇಲಿಯಾದ ಟೆನಿಸ್ ಆಟಗಾರ ಲೈಟನ್ ಹೆವಿಟ್, 2011ರ ಜನವರಿಯಲ್ಲಿ ನಡೆಯಲಿರುವ ಕೂಯಾಂಗ್ ಕ್ಲ್ಯಾಸಿಕ್ ಓಪನ್ ಪಂದ್ಯಾವಳಿಯಲ್ಲಿ ಹೊಸತನದಿಂದ ಆರಂಭಿಸುವುದಾಗಿ ಹೇಳಿದ್ದಾರೆ.

29 ವರ್ಷ ವಯಸ್ಸಿನ ಹೆವಿಟ್, ಕೂಯಾಂಗ್ ಕ್ಲ್ಯಾಸಿಕ್ ಓಪನ್ ಪಂದ್ಯಾವಳಿಯಲ್ಲಿ ವೃತ್ತಿಪರ ಟೆನಿಸ್‌ಗೆ ಮರಳಿದ ನಂತರ ಮೊದಲ ಬಾರಿಗೆ ಪಾಲ್ಗೊಳ್ಳುತ್ತಿದ್ದಾರೆ. ಕಳೆದ 2005ರಲ್ಲಿ ರನ್ನರ್-ಅಪ್ ಸ್ಥಾನವನ್ನು ಗಳಿಸಿದ್ದರು.

ವಿಶ್ವದ 11ನೇ ಶ್ರೇಯಾಂಕಿತ ಆಸ್ಟ್ರಿಯಾದ ಜುರ್ಗೆನ್ ಮೆಲ್ಝರ್ ಮತ್ತು ರಷ್ಯಾದ 22ನೇ ಶ್ರೇಯಾಂಕಿತ ನಿಕೊಲಾಯ್ ಡೆವಿಡೆಂಕೊ ಕೂಡಾ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೆಕ್ ಗಣರಾಜ್ಯದ ಥಾಮಸ್ ಬೆರ್ಡಿಚ್, ರಷ್ಯಾದ ಮಿಖೈಲ್ ಯೊಜ್ನಿ,ಸ್ಪೇನ್‌ನ ಫೆರ್ನಾಂಡೊ ವೆರ್ಡಾಸ್ಕೊ, ಜೊ-ವಿಲ್‌ಫ್ರೈಡ್ ತ್ಸೊಂಗಾ ಮತ್ತು ಗೇಲ್ ಮೊನ್‌‍ಫಿಲ್ಸ್ ಪಂದ್ಯಾವಳಿಯಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ