ಕೊನೆಗೂ ಎಚ್ಚೆತ್ತ ಸರಕಾರ; ಆಟಗಾರರಿಗೆ ಐದು ಲಕ್ಷ ಪ್ರಕಟ

ಬುಧವಾರ, 29 ಫೆಬ್ರವರಿ 2012 (13:30 IST)
PTI
ವಿವಿಧ ಮೂಲಗಳಿಂದ ಭಾರಿ ಟೀಕೆ ವ್ಯಕ್ತವಾಗಿದ್ದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕರ್ನಾಟಕ ಸರಕಾರವು, ಲಂಡನ್ ಒಲಂಪಿಕ್ಸ್‌ ಕ್ವಾಲಿಫೈಯರ್ ಪಂದ್ಯಾವಳಿ ಭಾಗವಹಿಸಿದ್ದ ರಾಜ್ಯದ ಆಟಗಾರರಿಗೆ ತಲಾ ಐದು ಲಕ್ಷ ರೂಪಾಯಿಗಳ ಬಹುಮಾನ ಮೊತ್ತವನ್ನು ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ ಘೋಷಿಸಿದೆ.

ಅಮೋಘ ಆಟದ ಪ್ರದರ್ಶನ ನೀಡಿದ ಭಾರತೀಯ ಆಟಗಾರರು ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿದ್ದರು. ಅಲ್ಲದೆ ಒಬ್ಬ ಮೀಸಲು ಆಟಗಾರನಿಗೆ ಒಂದು ಲಕ್ಷ ರೂಪಾಯಿ ಪ್ರಕಟಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ನಡೆದ ಟೂರ್ನಿಯಲ್ಲಿ ಭಾರತ ತಂಡವನ್ನು ರಾಜ್ಯದಿಂದ ನಾಯಕ ಭರತ್ ಕುಮಾರ್ ಚೇತ್ರಿ, ಮೀಡ್‌ಫೀಲ್ಡರ್ ಇಗ್ನೇಸ್ ಟಿರ್ಕಿ, ಉತ್ತಪ್ಪ ಸಣ್ಣವಂಡ ಕುಶಾಲಪ್ಪ, ರಘುನಾಥ್ ರಾಮಚಂದ್ರ ಒಕ್ಕಲಿಗ, ಸುನಿಲ್ ವಿಠಾಲಾಚಾರ್ಯ ಹಾಗೂ ವಿ. ಎಸ್. ವಿನಯ್ ಪ್ರತಿನಿಸಿದ್ದರು.

ವೆಬ್ದುನಿಯಾವನ್ನು ಓದಿ