ಕೊಚ್ಚಿ ಕ್ರೀಡಾಕೂಟಕ್ಕೆ ಮಂಗಳೂರಿನ ಪೂವಮ್ಮ

ಬುಧವಾರ, 17 ಡಿಸೆಂಬರ್ 2008 (17:21 IST)
ಡಿಸೆಂಬರ್ 20ರಿಂದ 24ರವರೆಗೆ ಇಲ್ಲಿ ನಡೆಯಲಿರುವ ಐದು ದಿನದ 69ನೇ ಇಂಟರ್ ಯ‌ೂನಿವರ್ಸಿಟಿ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ದೇಶಾದ್ಯಂತದ ಸುಮಾರು ಮ‌ೂರು ಸಾವಿರ ಅಥ್ಲೇಟ್ಸ್ ಭಾಗವಹಿಸುವ ನಿರೀಕ್ಷೆಯಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಕ್ಯಾಲಿಕಟ್ ಯ‌‌ೂನಿವರ್ಸಿಟಿಯಿಂದ ತಿಂತು ಲೂಕ, ಎಂ.ಜಿ. ಯ‌‌ೂನಿವರ್ಸಿಟಿಯಿಂದ ಸಿನಿ ಜೋಸ್ ಮತ್ತು ಎಸ್.ಆರ್. ಬಿಂದು, ಮಂಗಳೂರು ಯ‌‌ೂನಿವರ್ಸಿಟಿಯಿಂದ ಪೂವಮ್ಮ, ಕಣ್ಣೂರು ಯ‌‌ೂನಿವರ್ಸಿಟಿಯಿಂದ ಮಯೂಖ ಜಾನಿ ಮುಂತಾದವರು ಭಾಗವಹಿಸಲಿರುವ ಪ್ರಮುಖ ಅಥ್ಲೇಟ್‌ಗಳು. ಇವರಲ್ಲಿ ಮಂಗಳೂರಿನ ಪೂವಮ್ಮ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಗಮನ ಸೆಳೆದಿದ್ದರು.

ಪುರುಷ ಮತ್ತು ಮಹಿಳೆಯರಿಗಾಗಿ ಒಟ್ಟು 21 ವಿಭಾಗಗಳಲ್ಲಿ ಸ್ಪರ್ಧೆಯಿದ್ದು, ಇಲ್ಲಿನ ಮಹಾರಾಜ ಕಾಲೇಜು ಮೈದಾನದ ಎಂಟು ಸಾಲಿನ ಸಿಂಥೆಟಿಕ್ ಟ್ರ್ಯಾಕ್‌ನಲ್ಲಿ ನಡೆಯಲಿದೆ. ವೆಲ್ಲಿಂಗಡನ್ ಐಸ್‌ಲ್ಯಾಂಡ್ ರಸ್ತೆಯಲ್ಲಿ ಇದೇ ಸಂದರ್ಭದಲ್ಲಿ ಅರೆ ಮ್ಯಾರಥಾನ್ ಕೂಡ ನಡೆಯಲಿದೆ.

1993ರಲ್ಲಿ ಕೇರಳ ಇಂತಹ ಕ್ರೀಡಾಕೂಟವನ್ನು ಕೊಟ್ಟಾಯಮ್‌ನಲ್ಲಿ ಹಮ್ಮಿಕೊಂಡಿತ್ತು ಎಂದು ಪ್ರಾಯೋಜಕ ಸಮಿತಿಯ ಕಾರ್ಯದರ್ಶಿ ಜೇಸ್ ಜೇಮ್ಸ್ ಪತ್ರಕರ್ತರಿಗೆ ತಿಳಿಸಿದರು.

ವೆಬ್ದುನಿಯಾವನ್ನು ಓದಿ