ಕೋಲ್ಕತಾ ನಗರಕ್ಕೆ ಆಗಮಿಸಿದ ಲಯೋನೆಲ್ ಮೆಸ್ಸಿ

ಬುಧವಾರ, 31 ಆಗಸ್ಟ್ 2011 (16:20 IST)
PTI
ವಿಶ್ವದ ಖ್ಯಾತ ಫುಟ್ಬಾಲ್ ಆಟಗಾರ ಅರ್ಜಿಂಟಿನಾ ಫುಟ್ಬಾಲ್ ತಂಡದ ಆಟಗಾರ ಲಯೋನೆಲ್ ಮೆಸ್ಸಿ, ನಗರಕ್ಕೆ ಆಗಮಿಸಿದ್ದಾರೆ. ಆದರೆ, ವಿಮಾನ ನಿಲ್ದಾಣದಲ್ಲಿ ಕಾದಿದ್ದ ಅಭಿಮಾನಿಗಳನ್ನು ಭೇಟಿ ಮಾಡುವ ಅವಕಾಶ ಕಳೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಫುಟ್ಬಾಲ್ ಅಭಿಮಾನಿಗಳು ಆಪಾರ ಸಂಖ್ಯೆಯಲ್ಲಿರುವ ಕೋಲ್ಕತಾ ನಗರಕ್ಕೆ ಮೆಸ್ಸಿಯವರ ಭೇಟಿ ಆಪಾರ ಸಂತಸ ತಂದಿದೆ. ವಿಮಾನ ನಿಲ್ದಾಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಬೆಂಬಲಿಗರು ಹತ್ತನೆ ಸಂಖ್ಯೆಯ ಜೆರ್ಸಿಯನ್ನು ಧರಿಸಿ ಘೋಷಣೆಗಳನ್ನು ಕೂಗುತ್ತಾ ನೃತ್ಯದಲ್ಲಿ ಪಾಲ್ಗೊಂಡರು ಎಂದು ಫುಟ್ಬಾಲ್ ಫೆಡರೇಶನ್ ಅಧಿಕಾರಿಗಳು ತಿಳಿಸಿದ್ದಾರೆ.

ಲಯೋನೆಲ್ ಮೆಸ್ಸಿ, ಜೇವಿಯರ್ ಮಾಶೆರ್ನೊ ಹಾಗೂ ವೆನೆಜುವೆಲಾ ತಂಡದ ಮೂವರು ಆಟಗಾರರು ಕತಾರ್‌ನಿಂದ ನೇರವಾಗಿ ಇಂದು ಬೆಳಗಿನ ಜಾವ 3.30 ಗಂಟೆಗೆ ಕೋಲ್ಕತಾ ನಗರಕ್ಕೆ ಆಗಮಿಸಿದರು. ಮೆಸ್ಸಿಯವರಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದ್ದು, ವಿಮಾನ ನಿಲ್ದಾಣದಿಂದ ಯಾವ ಗೇಟಿನ ಮೂಲಕ ಮೆಸ್ಸಿಯವರನ್ನು ಕರೆದೊಯ್ಯಲಾಯಿತು ಎನ್ನುನ ಬಗ್ಗೆ ಮಾಧ್ಯಮದವರಿಗೂ ಕೂಡಾ ಮಾಹಿತಿ ಲಭ್ಯವಾಗಲಿಲ್ಲ.

ಅರ್ಜಿಂಟಿನಾ ಮತ್ತು ವೆನೆಜುವೆಲಾ ತಂಡಗಳ ನಡುವೆ ಸೆಪ್ಟೆಂಬರ್ 2 ರಂದು ಸ್ನೇಹಪರ ಪಂದ್ಯ ನಡೆಯಲಿದೆ ಎಂದು ಕೋಲ್ಕತಾ ಫುಟ್ಬಾಲ್ ಫೆಡರೇಶನ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ