ಕ್ವಾರ್ಟರ್‌ಗೆ ಲಗ್ಗೆಯಿಟ್ಟ ಇಂಡೋ-ಪಾಕ್ ಎಕ್ಸ್‌ಪ್ರೆಸ್

ಬುಧವಾರ, 8 ಜೂನ್ 2011 (11:12 IST)
PTI
ಜರ್ಮನಿಯ ಹಾಲೆಯಲ್ಲಿ ನಡೆಯುತ್ತಿರುವ ಗೆರ್ರಿ ವೆಬೆರ್ ಓಪನ್ ಟೆನಿಸ್ ಟೂರ್ನಮೆಂಟ್‌ನ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಪಾಕಿಸ್ತಾನದ ಹಾಶೀಮ್ ಉಲ್ ಹಕ್ ಖುರೇಷಿ ಜೋಡಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಮಂಗಳವಾರ ನಡೆದ ಪಂದ್ಯದಲ್ಲಿ ಕ್ರೋವೆಶಿಯಾದ ಇವಾನ್ ಡೊಡಿಗ್ ಮತ್ತು ಉಕ್ರೇನ್‌ನ ಅಲೆಕ್ಸಾಡೆಂರ್ ಡೊಲ್ಗೊಪೊಲಾವ್‌ರನ್ನು 7-5, 6-4ರ ನೇರ ಸೆಟ್‌ನಲ್ಲಿ ಮಣಿಸಿದ ಇಂಡೋ-ಎಕ್ಸ್‌ಪ್ರೆಸ್ ಜೋಡಿ ಎಂಟರ ಘಟ್ಟಕ್ಕೆ ಲಗ್ಗೆಯಿಟ್ಟಿದೆ.

ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಡೇವಿಸ್ ಕಪ್ ಆಟಗಾರ ಬೋಪಣ್ಣ ಹಾಗೂ ಖುರೇಷಿ ಜೋಡಿ ಇದೀಗ ಜರ್ಮನಿಯ ಡಸ್ಟಿನ್ ಬ್ರೌನ್ ಮತ್ತು ಫ್ರಾನ್ಸ್‌ನ ಗೇಲ್ ಮಾನ್‌ಫಿಲ್ಸ್ ಜೋಡಿಯನ್ನು ಎದುರಿಸಲಿದೆ.

ವೆಬ್ದುನಿಯಾವನ್ನು ಓದಿ