ಕ್ವಾರ್ಟರ್ ತಲುಪಿದ ಭಟ್, ಸೈನಾ ಸವಾಲು ಅಂತ್ಯ

ಶುಕ್ರವಾರ, 21 ನವೆಂಬರ್ 2008 (12:30 IST)
PTI
ಚೀನಾ ಓಪನ್ ಸೂಪರ್ ಸೀರೀಸ್‌ನಲ್ಲಿ ಜೆಕ್ ರಿಪೆಬ್ಲಿಕ್‌ನ ಪೀಟರ್ ಕೌಕಲ್ ಅವರನ್ನು ಮಣಿಸಿದ ಭಾರತೀಯ ಶಟ್ಲರ್ ಅರವಿಂದ್ ಭಟ್, ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಇನ್ನೊಂದು ಕಡೆ ಶಾಂಘೈನ ಮಹಿಳಾ ಡಬಲ್ಸ್‌ನಲ್ಲಿ ಸೈನಾ ನೆಹ್ವಾಲ್ ಸೋಲು ಕಾಣುವುದರ ಮೂಲಕ ಭಾರತದ ಸವಾಲು ಅಂತ್ಯಗೊಂಡಿದೆ.

ಒಂದು ಗೇಮ್ ಹಿನ್ನಡೆಯಿಂದ ತಿರುಗಿ ಬಿದ್ದ ಭಟ್ ಮುಂದಿನ ಎರಡು ಗೇಮ್‌ಗಳನ್ನು ತಮ್ಮದಾಗಿಸಿಕೊಂಡು, 18-21, 21-18, 21-15 ಅಂತರದಲ್ಲಿ ಕೌಕಲ್‌ರಿಗೆ ಸೋಲುಣಿಸಿದರು.

ಬುಧವಾರದಂದು ಆರಂಭಿಕ ಸುತ್ತಿನಲ್ಲಿಯೇ ಸಿಂಗಲ್ಸ್ ಪಂದ್ಯದಿಂದ ಹೊರಬಿದ್ದಿದ್ದ ಸೈನಾ, ಡಬಲ್ಸ್‌ನಲ್ಲಿ ಕೆನಡಾದ ಅನ್ನಾ ರೈಸ್ ಅವರ ಜೊತೆಗೂಡಿದ್ದರು.

ಕ್ರಮಾಂಕ ಹೊಂದಿಲ್ಲದ ಈ ಜೋಡಿ ನಾಲ್ಕನೇ ಕ್ರಮಾಂಕ ಜಂಗ್ ಉನ್ ಹಾ ಮತ್ತು ಮಿನ್ ಜಂಗ್ ಕಿಮ್ ಅವರೆದುರು 13-21, 11-21 ಅಂತರದಿಂದ ಸೋಲಿಗೆ ಶರಣಾಯಿತು.

ವೆಬ್ದುನಿಯಾವನ್ನು ಓದಿ