ಗೇಮ್ಸ್ ಆರಂಭ; ಮುಸ್ಲಿಂ ಕ್ರೀಡಾಳುಗಳಿಂದ ರಂಜಾನ್ ವ್ರತಾಚರಣೆ ಮುಂದೂಡಿಕೆ

ಶನಿವಾರ, 21 ಜುಲೈ 2012 (13:40 IST)
PR
ಇನ್ನು ಒಂದು ವಾರದೊಳಗೆ ಲಂಡನ್ ಒಲಿಂಪಿಕ್ಸ್ ಆರಂಭವಾಗಲಿರುವುದರಿಂದ ಈ ಮಹಾಕೂಟದಲ್ಲಿ ಭಾಗವಹಿಸುತ್ತಿರುವ ಜಗತ್ತಿನಾದ್ಯಂತದ ರಾಷ್ಟ್ರಗಳ ಮುಸ್ಲಿಂ ಕ್ರೀಡಾಪಟುಗಳು ತೀವ್ರ ಸಂದಿಗ್ಧ ಪರಿಸ್ಥಿತಿಗೆ ಸಿಲುಕುವಂತಾಗಿದೆ.

ಪವಿತ್ರ ರಂಜಾನ್ ವ್ರತಾಚರಣೆ ಸಹ ಆರಂಭವಾಗಿರುವುದರಿಂದ ಇದನ್ನು ಅನುಸರಿಸುವುದು ಕ್ರೀಡಾಳುಗಳಿಗೆ ಕಷ್ಟಕರವೆನಿಸಿದೆ. ಹಾಗಾಗಿ ರಂಜಾನ್ ಉಪವಾಸವನ್ನು ಮುಂದೂಡಲು ಬಹುತೇಕ ಮುಸ್ಲಿಂ ಅಥ್ಲೀಟ್‌ಗಳು ನಿರ್ಧರಿಸಿದ್ದಾರೆ.

30 ದಿನಗಳ ಪರ್ಯಂತ್ಯ ಸಾಗಲಿರುವ ಈ ಪವಿತ್ರ ದಿನಗಳಲ್ಲಿ 18 ಗಂಟೆಗಳಷ್ಟು ಹೊತ್ತು ಉಪವಾಸ ಮಾಡುವುದು ಕಷ್ಟವಾಗಿದ್ದರಿಂದ ಅಥ್ಲೀಟ್‌ಗಳು ಇಂತಹದೊಂದು ನಿರ್ಧಾರಕ್ಕೆ ಬಂದಿದ್ದಾರೆ.

ಸುಮಾರು 3,500ರಷ್ಟು ಅಥ್ಲೀಟ್‌ಗಳು ಲಂಡನ್ ಗೇಮ್ಸ್‌ನಲ್ಲಿ ಭಾಗವಹಿಸಲಿದ್ದು, ಉತ್ತಮ ಫಿಟ್ನೆಸ್ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಎಂದಿನಂತೆ ಆಹಾರ ಪಠ್ಯಕ್ರಮ ಅನುಸರಿಸಲು ನಿರ್ಧರಿಸಿದ್ದಾರೆ. ಅಲ್ಲದೆ ತಮ್ಮನ್ನು 'ಅಲ್ಲಾಹು' ಕ್ಷಮಿಸಲಿದ್ದಾರೆ ಎಂದು ಕ್ರೀಡಾಳುಗಳು ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ