ಚೆಸ್ : ಗೆಲುವಿನಡೆಗೆ ಆನಂದ್‌ ವಿಶ್ವನಾಥ್‌

ಶನಿವಾರ, 14 ಡಿಸೆಂಬರ್ 2013 (15:31 IST)
PR
ಚೆಸ್‌‌ ಕ್ಲಾಸಿಕ್‌ನಲ್ಲಿ ಗತ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ ಫ್ರಾನ್ಸ್‌‌ನ ಆಂದ್ರೇಯಿ ಇಸ್ತಾತೆಸ್ಕು ಮತ್ತು ಇಂಗ್ಲೆಂಡ್‌ನ ಯ್ಲೂಕ್‌ ಮೈಕಶಾನೆರನ್ನು ಸೋಲಿಸುವದರ ಮೂಲಕ ಮುನ್ನಡೆ ಸಾಧಿಸಿದ್ದಾರೆ. ಮೂರನೇ ಸುತ್ತಿನಲ್ಲಿ ಆನಂದ ಕಪ್ಪು ಕಾಯಿಗಳಿಂದ ಇಸ್ತಾತೆಸ್ಕು ವಿರುದ್ದ ಉತ್ತಮ ಪ್ರದರ್ಶನ ನೀಡಿದ್ದಾರೆ. ಸರಿಯಾದ ಸಮಯದಲ್ಲಿ ಕಾಯಿಗಳನ್ನು ಅದಲು ಬದಲು ಮಾಡಿ ಗೆಲುವನ್ನು ಸಾಧಿಸಿದ್ದಾರೆ .

ನಂತರ ಮೈಕ್‌ಶಾನೆರನ್ನು ವಿಶ್ವನಾಥನ್‌ ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ . ಈ ಗೆಲುವಿನಿಂದ ಆನಂದ್‌ ನಾಕೌಟ್‌‌ ಸುತ್ತಿನಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಇನ್ನೆರಡು ಪಂದ್ಯಗಳು ಗೆಲ್ಲುವುದು ಉಳಿದಿದೆ ಹಾಗು ಗ್ರೂಪ್‌‌ ಎ ನಲ್ಲಿ 10 ಅಂಕಪಡೆದು ಅಗ್ರ ಶ್ರೇಣಿಯಲ್ಲಿ ಇದ್ದಾರೆ.

ವೆಬ್ದುನಿಯಾವನ್ನು ಓದಿ