ಚೆಸ್ ವಿಶ್ವಕಪ್‌ಗೆ ಭಾರತ ಆತಿಥ್ಯ‌; ಆನಂದ್ ಆಶಯ

ಶುಕ್ರವಾರ, 8 ಜುಲೈ 2011 (14:53 IST)
PTI
ಚೆಸ್ ವಿಶ್ವಕಪ್‌ಗೆ ಭಾರತ ರಾಷ್ಟ್ರವು ಆತಿಥ್ಯ ವಹಿಸಬೇಕು ಎಂದು ಚೆಸ್ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಆಶಯ ವ್ಯಕ್ತಪಡಿಸಿದ್ದಾರೆ.

ಚೆಸ್ ವಿಶ್ವಕಪ್‌ಗೆ ಚೆನ್ನೈ ಬಿಡ್ಡಿಂಗ್ ಸಲ್ಲಿಸುತ್ತಿರುವ ಹಿನ್ನಲೆಯಲ್ಲಿ ಪೂರಕವಾಗಿ ಪ್ರತಿಕ್ರಿಯಿಸಿರುವ ಆನಂದ್, ಸ್ವದೇಶದಲ್ಲಿ ಆಡಲು ಹೆಚ್ಚು ಉತ್ಸುಕನಾಗಿದ್ದೇನೆ ಎಂದಿದ್ದಾರೆ.

ತವರಿನ ಬೆಂಬಲದೊಂದಿಗೆ ಚೆನ್ನೈನಲ್ಲಿ ದೇಶವನ್ನು ಪ್ರತಿನಿಧಿಸಲು ನಾನು ಹೆಚ್ಚು ಹರ್ಷಗೊಂಡಿದ್ದೇನೆ. ಆದರೆ ಇತರ ಕ್ರೀಡೆಗಳ ಹಾಗೆ ಪ್ರೇಕ್ಷಕರಿಗೆ ಪ್ರೋತ್ಸಾಹ ನೀಡಲು ಸಾಧ್ಯವಿಲ್ಲ. ಹೀಗಿದ್ದರೂ ಅಭಿಮಾನಿಗಳ ಸಾನಿಧ್ಯದ ಅಗತ್ಯವಿದೆ ಎಂದಿದ್ದಾರೆ.

ಮಾತು ಮುಂದುವರಿಸಿದ ವಿಶ್ವ ಚಾಂಪಿಯನ್ ಆನಂದ್, ಚೆಸ್ ವಿಶ್ವಕಪ್‌ ಭಾರತದಲ್ಲಿ ನಡೆದರೆ ಅದರಿಂದ ದೇಶಕ್ಕೆ ಉತ್ತೇಜನ ಸಿಗಲಿದೆ ಎಂದಿದ್ದಾರೆ. ಭಾರತೀಯ ಹೊಸ ಪ್ರತಿಭೆಗಳ ಬಗ್ಗೆ ಮಾತಾನಡಿದ ಆನಂದ್, ಪಿ. ಹರಿಕೃಷ್ಣ ಪ್ರತಿಭಾವಂತ ಆಟಗಾರ ಎಂದಿದ್ದಾರೆ.

ಹಾಗೆಯೇ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎರಡು ಕ್ರೀಡೆಗಳು ಅದರದ್ದೇ ಆದ ವಿಭಾಗದಲ್ಲಿ ಜನಪ್ರಿಯತೆಯನ್ನು ಹೊಂದಿದ್ದು, ಹೀಗಾಗಿ ಹೋಲಿಕೆ ಸಮಂಜಸವಲ್ಲ ಎಂದಿದ್ದಾರೆ. ಕ್ರಿಕೆಟ್ ದೇಶದ ನಂ. 1 ಕ್ರೀಡೆ; ಸಚಿನ್ ಕೂಡಾ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ