ಜ್ಯೂನಿಯರ್ ಹಾಕಿ ವಿಶ್ವಕಪ್‌ನ ಪ್ರಾಯೋಜಕತ್ವ ವಹಿಸಿಕೊಂಡ ಹೀರೊ

ಬುಧವಾರ, 13 ನವೆಂಬರ್ 2013 (17:00 IST)
PR
ಜ್ಯೂನಿಯರ್ ಹಾಕಿ ವಿಶ್ವಕಪ್‌ನ ಪ್ರಾಯೋಜಕತ್ವ ವಿಶ್ವದ ಬೃಹತ್ ದ್ವಿಚಕ್ರ ವಾಹನ ಕಂಪೆನಿ ಹೀರೊ ವಹಿಸಿಕೊಂಡಿದೆ.

2015 ರಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವ ಜ್ಯೂನಿಯರ್ ಹಾಕಿ ಕಪ್‌ನ ಮುಖ್ಯ ಪ್ರಾಯೋಜಕತ್ವ ವಹಿಸಿಕೊಳ್ಳಲಾಗಿದೆ ಎಂದು ಹೀರೊ ಕಂಪೆನಿಯ ಮೂಲಗಳು ತಿಳಿಸಿವೆ.

ದೆಹಲಿಯ ಮೇಜರ್‌ ಧ್ಯಾನಚಂದ್‌ ಕ್ರೀಡಾಂಗಣದಲ್ಲಿ ಡಿಸೆಂಬರ್‌ 2015 ರಂದು ಪ್ರಾರಂಭವಾಗುವ ಈ ಪಂದ್ಯಾವಳಿಯಲ್ಲಿ 16 ತಂಡ ( ಅಂಡರ್‌-21)ಗಳು ಭಾಗವಹಿಸಲಿವೆ.

ವೆಬ್ದುನಿಯಾವನ್ನು ಓದಿ