ಟೆನಿಸ್ ಚಾಂಪಿಯನ್‌ಶಿಪ್: ವಿಷ್ಣು, ಭಾಂಭ್ರಿ ಎರಡನೇ ಸುತ್ತಿಗೆ

ಗುರುವಾರ, 13 ಅಕ್ಟೋಬರ್ 2011 (09:13 IST)
ನ್ಯಾಷನಲ್ ಟೆನಿಸ್ ಚಾಂಪಿಯನ್‌ಶಿಪ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನ ಪಂದ್ಯದಲ್ಲಿ ವಿಷ್ಣುವರ್ಧನ್, ತಮ್ಮ ಎದುರಾಳಿ ಸುನೀಲ್ ಸಿಪೆಯಾ ವಿರುದ್ಧ ಜಯಗಳಿಸಿದರೆ, ಯೂಕಿ ಭಾಂಭ್ರಿ ತಮ್ಮ ಎದುರಾಳಿ ವಿವೇಕ್ ಶೋಕಿನ್ ವಿರುದ್ಧ ಗೆಲುವು ಪಡೆದು ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ವಿಷ್ಣುವರ್ಧನ್, ತಮ್ಮ ಎದುರಾಳಿ ಸಿಪೆಯಾ ವಿರುದ್ಧ 7-6 (3) 6-3 ಸೆಟ್‌ಗಳಿಂದ ಜಯಗಳಿಸಿ ಎರಡನೇ ಸುತ್ತಿಗೆ ತಲುಪಿದ್ದಾರೆ.

ಕಳೆದ ಕೆಲ ತಿಂಗಳುಗಳಿಂದ ಗಾಯದ ಸಮಸ್ಯೆಯಿಂದ ಪಂದ್ಯಾವಳಿಗಳಿಂದ ದೂರವಾಗಿದ್ದ ಯೂಕಿ, ಮೊದಲ ಸುತ್ತಿನ ಪಂದ್ಯದಲ್ಲಿ ತಮ್ಮ ಎದುರಾಳಿ ವಿವೇಕ್ ಶೋಕಿನ್ ವಿರುದ್ಧ 6-1 6-1 ಸೆಟ್‌ಗಳಿಂದ ಜಯಗಳಿಸಿದ್ದಾರೆ.

ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ರುಷ್ಮಿ ಚಕ್ರವರ್ತಿ ತಮ್ಮ ಎದುರಾಳಿ ವಾನಿಯಾ ದಂಗವಾಲ್ ವಿರುದ್ಧ 6-1, 6-0 ಸೆಟ್‌ಗಳಿಂದ ಗೆಲುವು ಪಡೆದು ಶುಭಾರಂಭ ಮಾಡಿದ್ದಾರೆ.

ಮಾಜಿ ಚಾಂಪಿಯನ್ ಇಶಾ ಲಖಾನಿ, ತಮ್ಮ ಎದುರಾಳಿ ಐಶ್ವರ್ಯ ಅಗರ್‌ವಾಲ್ ವಿರುದ್ಧ 6-0, 6-1 ಸೆಟ್‌ಗಳಿಂದ ಜಯಗಳಿಸಿ, ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಯೂಕಿ ಸಹೋದರಿ ಪ್ರೇರಣಾ ಭಾಂಭ್ರಿ, ಮೊದಲ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ ತಮ್ಮ ಎದುರಾಳಿ ರುತುಜಾ ಭೋಸ್ಲೆ ವಿರುದ್ಧ 2-6, 6-4, 5-7 ಸೆಟ್‌ಗಳಿಂದ ಸೋಲನುಭವಿಸಿ ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ.

ವೆಬ್ದುನಿಯಾವನ್ನು ಓದಿ