ಟೆನಿಸ್ ಚಾಂಪಿಯನ್‌ಶಿಪ್: ವಿಷ್ಣು, ಸಕೇತ್ ಸೆಮಿಫೈನಲ್ ಪ್ರವೇಶ

ಶುಕ್ರವಾರ, 14 ಅಕ್ಟೋಬರ್ 2011 (15:51 IST)
PTI
ಡಿಎಲ್‌ಟಿಎ ಕಾಂಪ್ಲೆಕ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯಾಷನಲ್ ಟೆನಿಸ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ, ವಿಷ್ಣುವರ್ಧನ್ ಮತ್ತು ಸಕೇತ್ ಮೈನೇನಿ ಸೆಮಿಫೈನಲ್ ಹಂತವನ್ನು ಪ್ರವೇಶಿಸಿದ್ದಾರೆ.

ವಿಷ್ಣುವರ್ಧನ್, ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಮ್ಮ ಎದುರಾಳಿ ಎಸ್.ವಿ.ಅಭಿಷೇಕ್ ವಿರುದ್ಧ 6-2, 6-3 ಸೆಟ್‌ಗಳಿಂದ ಸುಲಭವಾಗಿ ಜಯಗಳಿಸಿ ಸೆಮಿಫೈನಲ್ ತಲುಪಿದ್ದಾರೆ.

ಆಂಧ್ರ ಮೂಲದ ಸಕೇತ್ ಮೈನೇನಿ, ತಮ್ಮ ಎದುರಾಳಿ ವಿಜಯ್ ಪ್ರಶಾಂತ್ ವಿರುದ್ಧ 6-3, 6-1 ಸೆಟ್‌ಗಳಿಂದ ಜಯಗಳಿಸಿ ಸೆಮಿಫೈನಲ್ ತಲುಪಿದ್ದಾರೆ.

ಏತನ್ಮಧ್ಯೆ, ದೆಹಲಿಯ ಉದಯೋನ್ಮುಖ ಆಟಗಾರ ಯೂಕಿ ಭಾಂಭ್ರಿ ತಮ್ಮ ಎದುರಾಳಿ ಅಂಕಿತ್ ಸಂತದೇವಾ ವಿರುದ್ಧ 6-1, 6-3 ಸೆಟ್‌ಗಳಿಂದ ಸುಲಭ ಗೆಲುವು ಪಡೆದಿದ್ದಾರೆ.

ಇಶಾ ಲಖಾನಿ ತಮ್ಮ ಗೆಲುವಿನ ಓಟ ಮುಂದುವರಿಸಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶೀತಲ್ ಗೋಸ್ವಾಮಿ ವಿರುದ್ಧ 4-6, 6-2, 6- 3 ಸೆಟ್‌ಗಳಿಂದ ಜಯಗಳಿಸಿದ್ದಾರೆ.

ರುಷ್ಮಿ ಚಕ್ರವರ್ತಿ, ತಮ್ಮ ಎದುರಾಳಿ ಶಿವಿಕಾ ಬುರ್ಮನ್ ವಿರುದ್ಧ 6-0, 6-2 ಸೆಟ್‌ಗಳಿಂದ ಗೆಲುವು ಪಡೆದು ಮುನ್ನಡೆ ಸಾಧಿಸಿದ್ದಾರೆ.ಸೌಜನ್ಯ ಭಾವಿಶೆಟ್ಟಿ, ತಮ್ಮ ಎದುರಾಳಿ ರಿಶಿಕಾ ಸುಂಕರಾ ವಿರುದ್ಧ 6-7 (5), 7-5, 4-0 ಸೆಟ್‌ಗಳಿಂದ ಗೆಲುವು ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ