ಟೆನಿಸ್ : ಜೆಕ್ ಗಣರಾಜ್ಯಕ್ಕೆ ಫೆಡರೇಶನ್ ಕಪ್ ಪ್ರಶಸ್ತಿ

ಸೋಮವಾರ, 7 ನವೆಂಬರ್ 2011 (17:25 IST)
PTI
ಫೆಡರೇಶನ್ ಕಪ್ ಫೈನಲ್ ಡಬಲ್ಸ್ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಕ್ವೆಟಾ ಪೆಶ್ಕೆ ಮತ್ತು ಲೂಸೈ ರಾಡೆಕ್ಕಾ ತಮ್ಮ ರಷ್ಯಾ ಎದುರಾಳಿಯ ವಿರುದ್ಧ 6-4, 6-2 ಸೆಟ್‌ಗಳಿಂದ ಜಯಗಳಿಸಿ, ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಶಸ್ತಿಯನ್ನು ತಂದುಕೊಟ್ಟಿದ್ದಾರೆ.

ಇದಕ್ಕಿಂತ ಮೊದಲು, ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾ ತಮ್ಮ ಎದುರಾಳಿ ಸ್ವೆಟ್ಲಾನಾ ಕುನೆಟ್ಸೊವಾ ವಿರುದ್ಧ 4 -6, 6-2, 6-3 ಸೆಟ್‌ಗಳಿಂದ ಗೆಲುವು ಪಡೆದಿದ್ದಾರೆ. 1993ರಲ್ಲಿ ಸ್ಲೋವೇಕಿಯಾದಿಂದ ಬೇರ್ಪಟ್ಟು ಪ್ರತ್ಯೇಕ ರಾಷ್ಟ್ರವಾದ ಜೆಕ್ ಗಣರಾಜ್ಯಕ್ಕೆ ಮೊದಲ ಬಾರಿ ಫೆಡರೇಶನ್ ಕಪ್ ಪ್ರಶಸ್ತಿ ಒಲಿದು ಬಂದಿದೆ.

ಕ್ವಿಟೋವಾ ವಿರುದ್ಧ ನೇರ ಸೆಟ್‌ಗಳಿಂದ ಸೋಲನುಭವಿಸಿದ ಕಿರಿಲೆಂಕೋ ಅವರ ಬದಲಿಗೆ ಆಯ್ಕೆಯಾದ ಆನಾಸ್ತಾಸಿಯಾ ಪವ್ಲೆಚೆನ್‌ಕೊವಾ, ತಮ್ಮ ಜೆಕ್ ಎದುರಾಳಿ ಲೂಸಿಯಾ ಸಫಾರೊವಾ ವಿರುದ್ಧ ರಿವರ್ಸ್ ಸಿಂಗಲ್ಸ್‌ನಲ್ಲಿ 6-2, 6-4 ಸೆಟ್‌ಗಳಿಂದ ಜಯಗಳಿಸಿ 2-2 ಅಂತರದಿಂದ ಸಮಬಲ ಸಾಧಿಸಿದರು.

1988ರಲ್ಲಿ ನಡೆದ ಜೆಕೆಸ್ಲೋವಾಕಿಯಾ ಮತ್ತು ಸೋವಿಯತ್ ಯುನಿಯನ್ ವಿರುದ್ಧ 2-1 ಸೆಟ್‌ಗಳಿಂದ ಜಯಗಳಿಸಿ ಮುನ್ನಡೆ ಸಾಧಿಸಿತ್ತು.

ವೆಬ್ದುನಿಯಾವನ್ನು ಓದಿ