ಡ್ಯುರಾಂಡ್ ಕಪ್: ಚರ್ಚಿಲ್ ತಂಡಕ್ಕೆ ಗೆಲುವು

ಬುಧವಾರ, 31 ಅಕ್ಟೋಬರ್ 2007 (17:56 IST)
ನಾಯಕ ಒಡಾಫೆ ಒನ್ಯಾಕ್ ಒಕೋಲಿ ಅವರ ಹ್ಯಾಟ್ರಿಕ್ ಸಾಧನೆಯ ನಾಲ್ಕು ಗೋಲುಗಳ ನೆರವಿನಿಂದ ಗೋವಾದ ಚರ್ಚಿಲ್ ತಂಡವು, ಬೆಂಗಳೂರಿನ ಎಚ್ಎಎಲ್ ತಂಡದ ವಿರುದ್ದ, 120ನೇ ಒಸಿಯಾನ್ ಡ್ಯುರಾಂಡ್ ಕಪ್ ಫುಟ್ಬಾಲ್ ಪಂದ್ಯಾವಳಿಯ ಕ್ವಾರ್ಟರ್ ಪೈನಲ್ ಪಂದ್ಯದಲ್ಲಿ 4-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದೆ.

ಒಕೋಲಿ ಸತತವಾಗಿ 16,57,79 ಮತ್ತು 86 ನೇ ನಿಮಿಷದಲ್ಲಿ ನಾಲ್ಕು ಗೋಲು ಬಾರಿಸಿದರು, ಎದುರಾಳಿ ಎಚ್ಎಎಲ್ 65ನೇ ನಿಮಿಷದಲ್ಲಿ ಒಂದು ಗೋಲು ದಾಖಲಿಸಿತು.

ಪ್ರಸಕ್ತ ಟೂರ್ನಿಯಲ್ಲಿ ನೇರವಾಗಿ ಕ್ವಾರ್ಟರ್ ಫೈನಲ್ ಹಂತವನ್ನು ನೇರವಾಗಿ ಪ್ರವೇಶಿಸಿದ ಚರ್ಚಿಲ್ ತಂಡವು ತನಗಿಂತ ಪ್ರಬಲ ತಂಡವಾಗಿರುವ ಎಚ್ಎಎಲ್ ತಂಡವನ್ನು ಯಶಸ್ವಿಯಾಗಿ ಸದೆಬಡಿಯುವುವಲ್ಲಿ ಯಶಸ್ವಿಯಾಯಿತು. ಪಂದ್ಯದ ದ್ವಿತೀಯಾರ್ಧದಲ್ಲಿ ಕೆಲವು ಕ್ಷಣಗಳವರೆಗೆ ದಾಳಿಯಲ್ಲಿ ವಿಫಲವಾಗಿದ್ದ ಗೋವಾದ ತಂಡವು ಅಕ್ಷರಶಃ ಪಂದ್ಯದುದ್ದಕ್ಕೂ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿತ್ತು.

ಚರ್ಚಿಲ್ ತಂಡದ ಮಿಡ್ ಫೀಲ್ಡ್ ಫುಟ್ಬಾಲ ಪಟು ಚಂದಮ್ ಚಿತ್ರಸೇನ್, ಮುನ್ಪಡೆಯಲ್ಲಿ ದಾಳಿಯ ನೆತೃತ್ವವನ್ನು ವಹಿಸಿಕೊಂಡಿದ್ದ ನಾಯಕ ಒಕೋಲಿಗೆ ಬೆಂಗಾವಲಾಗಿ ನಿಂತು. ಎಚ್ಎಎಲ್ ರಕ್ಷಣಾ ಕೋಟೆಯನ್ನು ಭೇದಿಸಿದರು.

ವೆಬ್ದುನಿಯಾವನ್ನು ಓದಿ