ತಮಗೆ ಕಡಿಮೆ ಮೊತ್ತ ಸಿಕ್ಕಿದ್ದಕ್ಕೆ ನಿರಾಶೆಯಾಗಿದೆ : ಜ್ವಾಲಾ ಗುಟ್ಟಾ

ಮಂಗಳವಾರ, 23 ಜುಲೈ 2013 (12:10 IST)
PR
ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾಗೆ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್‌ನ ಹರಾಜಿನಲ್ಲಿ ಕಡಿಮೆ ಮೊತ್ತದ ಹಣ ಸಿಕ್ಕ ಕಾರಣ ತೀರಾ ನಿರಾಶೆಯಾಗಿದೆಯಂತೆ . ಜ್ವಾಲಾ ಮತ್ತು ಅಶ್ವಿನಿ ಪೊನ್ನಪ್ಪಾ ಅವರ ಮೂಲ ಧನ 50,000 ಡಾಲರ್ ಆಗಿತ್ತು. ಆದರೆ ಇವರು ಹರಾಜಾದದ್ದು ಕೇವಲ 25,000 ಡಾಲರ್‌ಗೆ ಮಾತ್ರ. ಈ ಹಿನ್ನೆಲೆಯಲ್ಲಿ ಇವರಿಬ್ಬರಿಗೆ ತೀವ್ರ ನಿರಾಶೆ ಆಗಿದೆಯೆಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಜ್ವಾಲಾ ಅವರಿಗೆ ದಿಲ್ಲಿ ತಂಡ 31,000 ಡಾಲರ್‌‍ಗೆ ಖರೀದಿ ಮಾಡಿದ್ದರೆ ಪೊನ್ನಪ್ಪ ಅವರನ್ನು ಪುಣೆ ತಂಡ ಕೇವಲ 25,000 ಡಾಲರ್ ಗೆ ಖರೀದಿ ಮಾಡಿದೆ.

ನಾನು ಮತ್ತು ಅಶ್ವಿನಿ ಐಕಾನ್ ಆಟಗಾರರಾಗಿದ್ದು, ನಮ್ಮ ಬಗ್ಗೆ ಬಹಳಷ್ಟು ತಿಳಿದುಕೊಳ್ಳಬೇಕಾಗಿತ್ತು . ವಾಸ್ತವಾಂಶವೇನೆಂದರೆ ಮಹಿಳಾ ವಿಭಾಗಕ್ಕೆ ತೀರಾ ಅನ್ಯಾಯವಾಗಿದೆ ಎಂದು ಜ್ವಾಲಾ ಗುಟ್ಟಾ ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ