ದೆಹಲಿಯ ಸಂತೋಷ ಟ್ರೋಫಿಯ ಹೀರೋ ಬನರ್ಜಿಯ ನಿಧನ

ಬುಧವಾರ, 19 ಫೆಬ್ರವರಿ 2014 (16:19 IST)
PR
ನವದೆಹಲಿ: ದೆಹಲಿಯ 88 ವರ್ಷದ ಫುಟ್ಬಾಲ್ ಆಟಗಾರ ಭವಾನಿ ಬನರ್ಜಿ ಸಾವನ್ನಪ್ಪಿದ್ದಾರೆ. 1944ರಲ್ಲಿ ಸಂತೋಷ್ ಟ್ರೋಫಿಯಲ್ಲಿ ತನ್ನ ಪಂದ್ಯನ್ನು ಗೆಲ್ಲಿಸುವಲ್ಲಿ ಭವಾನಿಯ ಪಾತ್ರ ಸಾಕಷ್ಟಿತ್ತು. ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಇವರು ಬಳಲುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ನಿನ್ನೆ ತಮ್ಮ ಸ್ವ ಗೃಹದಲ್ಲಿ ಮರಣವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇವರು ಒಬ್ಬ ಮಗ ಮತ್ತು ಮಗಳನ್ನು ಬಿಟ್ಟು ಅಗಲಿದ್ದಾರೆ.

ಭವಾನಿ ಬನರ್ಜಿ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 1944ರ ಸಂತೋಷ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಸಾಕಷ್ಟು ಶ್ರಮ ವಹಿಸಿದ್ದರು ಎನ್ನಲಾಗಿದೆ. ದೆಹಲಿಯಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಬಂಗಾಲ ತಂಡವನ್ನು 2-0 ಅಂತರದಿಂದ ಗೆಲುವನ್ನು ಸಾಧಿಸಿದ್ದರು .

ಭವಾನಿ ಬನರ್ಜಿಯವರ ನಿಧನಕ್ಕೆ ದೆಹಲಿಯ ಸಾಕರ್‌ ಸಂಘ ಶೋಕ ವ್ಯಕ್ತ ಪಡಿಸಿದೆ. . ಎಐಎಎಫ್‌ಎಫ್‌ ಉಪಾಧ್ಯಕ್ಷ ಮತ್ತು ಡಿಯೆಸರ್‌ ಅಧ್ಯಕ್ಷ ಸಭಾಷ್‌ ಚೊಪಡಾ ಕೂಡ ಶೋಕ ವ್ಯಕ್ತಪಡಿಸಿದ್ದಾರೆ ಎಂ3ದು ದೆಹಲಿಯ ಖಾಸಗಿ ಮಾದ್ಯಮಗಳು ವರದಿ ಮಾಡಿವೆ.

ವೆಬ್ದುನಿಯಾವನ್ನು ಓದಿ