ದೇಶಿಯ ಪುಟ್ಬಾಲ್‌ಗೆ ತಾರಾ ಮೆರಗು, ತಂಡಗಳನ್ನು ಖರೀದಿಸಿದ ಸಚಿನ್, ಸೌರವ್.

ಸೋಮವಾರ, 14 ಏಪ್ರಿಲ್ 2014 (10:54 IST)
ಭಾರತೀಯ ಕ್ರಿಕೆಟ್‌ನ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಇಂಡಿಯನ್ ಸೂಪರ್ ಲೀಗ್ ಫ್ರಾಂಚೈಸಿಯನ್ನು ಖರೀದಿಸುವ ಮೂಲಕ ದೇಶಿಯ ಪುಟ್ಬಾಲ್‌ಗೆ ಹೊಸ ಆಯಾಮ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಜೊತೆಗೆ ಬಾಲಿವುಡ್ ನಟರಾದ ಸಲ್ಮಾನ, ಖಾನ್ ರಣಬೀರ್ ಕಪೂರ, ನಟರಾಜ್ ಜಾನ್ ಕೂಡಾ ಫ್ರಾಂಚೈಸಿಯನ್ನು ಖರೀದಿಸಿ ಪಂದ್ಯಾವಳಿಯ ಆಕರ್ಷಣೆಯನ್ನು ಹೆಚ್ಚಿಸಿದ್ದಾರೆ.
PTI

ಐಎಂಜಿ-ರಿಲಯನ್ಸ್ ಆಯೋಜಿಸುತ್ತಿರುವ ಪಂದ್ಯಾವಳಿ ಸೆಪ್ಟೆಂಬರ್-ನವೆಂಬರ್‌ನಲ್ಲಿ ಜರುಗಲಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಮುಂಬೈನಲ್ಲಿ ಎಂಟು ತಂಡಗಳ ಖರೀದಿಗೆ ಹರಾಜು ಪ್ರಕ್ರಿಯೆ ನಡೆಯಿತು. ಐಬಿಎಲ್ ಹೈದರಾಬಾದ ಹಾಟ್ ಸ್ಪಾಟ್ ತಂಡದ ಮಾಲೀಕತ್ವ ಹೊಂದಿರುವ ಪಿವಿಪಿ ವೆಂಚರ್ಸ್ ಜೊತೆ ಕ್ರಿಕೆಟ್ ದಿಗ್ಗಜ ಸಚಿನ ತೆಂಡೂಲ್ಕರ್ ಕೊಚ್ಚಿ ತಂಡವನ್ನು ಖರೀದಿಸಿದರೆ, ಸೌರವ್ ಗಂಗೂಲಿ ಪ್ರಸ್ತುತ ವರ್ಷ ಸ್ಪೇನ್ ಲಾ ಲೀಗ್ ಚಾಂಪಿಯನ್ ಆಗಲಿರುವ ಅಟ್ಲೆಟಿಕೊ ಮ್ಯಾಡ್ರಿಡ್ ತಂಡದ ಜೊತೆಗೂಡಿ ಕೊಲ್ಕತ ಫ್ರಾಂಚೈಸಿಯನ್ನು ಖರೀದಿಸಿದರು.

ಬೆಂಗಳೂರು ತಂಡವನ್ನು ಸನ್ ಸಮೂಹ ಸಂಸ್ಥೆ, ದೆಹಲಿ ತಂಡವನ್ನು ಡೆನ್ ನೆಟ್ವಕರ್, ಮುಂಬೈ ತಂಡವನ್ನು ನಟ ರಣಬೀರ್ ಕಪೂರ ಮತ್ತು ಬಿಮಾಲ್ ಪಾರೇಖ್ , ಪುಣೆ ತಂಡವನ್ನು ನಟ ಸಲ್ಮಾನ್ ಖಾನ್, ವಾಧ್ವನ್ ಸಮೂಹ, ಗುವಾಹಟಿ ತಂಡವನ್ನು ಜಾನ್ ಅಬ್ರಾಹಂ, ಶಿಲ್ಲಾಂಗ್ ಲಾಜಾಂಗ್, ಗೋವಾ ತಂಡವನ್ನು ವಿಡಿಯೋಕಾನ್, ದತ್ತರಾಜ್ ಸಲ್‌ಗಾಂವಕರ ವಕರ್, ಶ್ರೀನಿವಾಸ ಡೆಂಪೋ ಖರೀದಿಸಿದ್ದಾರೆ. ಆದರೆ ಎಷ್ಟು ಹಣಕ್ಕೆ ಇವರು ಪ್ರಾಂಚೈಸಿ ಖರೀದಿಸಿದ್ದಾರೆ ಎಂದು ತಿಳಿದು ಬಂದಿಲ್ಲ .

ವೆಬ್ದುನಿಯಾವನ್ನು ಓದಿ