ಧ್ಯಾನಚಂದ್‌‌ಗೆ ಭಾರತರತ್ನ ನೀಡವ ಬಗ್ಗೆ ಸರಕಾರ ಚಿಂತನೆ: ಸಿಂಗ್

ಬುಧವಾರ, 4 ಡಿಸೆಂಬರ್ 2013 (15:59 IST)
PR
ಹಾಕಿ ಮಾಂತ್ರಿಕ ಧ್ಯಾನಚಂದ್ ಕ್ರೀಡಾಜಗತ್ತಿಗೆ ನೀಡಿದ ಸೇವೆಯನ್ನು ಪರಿಗಣಿಸಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಕ್ರೀಡಾ ಸಚಿವ ಜಿತೆಂದ್ರ ಸಿಂಗ್‌‌‌ ಹೇಳಿದ್ದಾರೆ

ಹಾಕಿ ಮಾಂತ್ರಿಕ ಧ್ಯಾನಚಂದ್ ಅವರಿಗೆ ಭಾರತ ರತ್ನ ನೀಡುವುದಾಗಿ ಮೊದಲು ಸರ್ಕಾರ ಘೋಷಿಸಿತ್ತು ಆದರೆ ನಂತರ ಧ್ಯಾನ ಚಂದ್ ಅವರ ಬದಲಿಗೆ ಸಚಿನ್‌ ತೆಂಡ್ಯೂಲ್ಕರ್‌ಅವರಿಗೆ ನೀಡುವುದಾಗಿ ಘೋಷಿಸಿದೆ. ಆದರೆ ಈಗ ಮತ್ತೆ ಧ್ಯಾನಚಂದ್‌ಗೆ ಪ್ರಶಸ್ತಿ ನೀಡುವ ಬಗ್ಗೆ ಸರಕಾರದ ವಲಯದಲ್ಲಿ ಚರ್ಚೆ ನಡೆಸಲಾಗುತ್ತಿದೆ.

ಪಂಜಾಬನ್‌ಲ್ಲಿ " ವಾರ್ ಹಿರೋಜ್ ಸ್ಟೇಡಿಯಂ" ನಲ್ಲಿ ನಡೆದ ಸಮಾರಂಭವೊಂದರಲ್ಲಿ ಕ್ರೀಡಾ ಮಂತ್ರಿ ಜೀತೆಂದ್ರ ಸಿಂಗ್‌ ತಿಳಿಸಿದ್ದಾರೆ.

ಸರ್ಕಾರ ಅಂತರಾಷ್ಟ್ರೀಯ ಒಲಂಪಿಕ್‌ ಸಮಿತಿ ಮತ್ತು ಭಾರತೀಯ ಒಲಂಪಿಕ್‌ ಸಂಘದ ನಡುವೆ ಇರುವ ಗೊಂದಲವನ್ನು ಶೀಘ್ರದಲ್ಲಿ ಬಗೆಹರಿಸಲಾಗುವುದು ಮತ್ತು ದೇಶದ ಅಥ್ಲೆಟಿಕ್‌ ಕೀಡಾಪಟುಗಳು ಒಲಂಪಿಕ್‌ ಕ್ರೀಡೆಯಲ್ಲಿ ಭಾರತೀಯ ಧ್ವಜ ಹಿಡಿದುಕೊಂಡು ಭಾಗವಹಿಸಲಿದ್ದಾರೆ ಎಂದು ಕ್ರೀಡಾ ಮಂತ್ರಿ ಹೇಳಿದರು.

ಒಲಂಪಿಕ್‌ನಲ್ಲಿ ಕಬ್ಬಡ್ಡಿ ಕ್ರೀಡೆ ಮತ್ತೆ ಸೇರಿಸುವ ಪ್ರಯತ್ನಕ್ಕೆ ಸರ್ಕಾರ ಸಿದ್ದವಿದೆ ಎಂದು ಪಂಜಾಬ್ ಸರ್ಕಾರದ ಇಚ್ಚೆಯ ಬಗ್ಗೆ ಕೇಳಿದ ಪ್ರಶ್ನೆಗೆ ಜೀತೆಂದ್ರ ಸಿಂಗ್‌ ಉತ್ತರಿಸಿದರು.

ವೆಬ್ದುನಿಯಾವನ್ನು ಓದಿ