ನಡಾಲ್‌, ಸೆರೆನಾಗೆ ಫ್ರಾನ್ಸ್ ‌ದೇಶದ ಪ್ರಶಸ್ತಿ

ಶನಿವಾರ, 21 ಡಿಸೆಂಬರ್ 2013 (16:15 IST)
PR
ಪೆರಿಸ್‌ : ಫ್ರೆಂಚ್‌ನ ಕ್ರೀಡಾ ಪತ್ರಿಕೆ " ಲಿ ಇಕ್ವಿಪ್ " ವರ್ಷದ ಸರ್ವ ಶ್ರೇಷ್ಠ ಪುರುಷ ಮತ್ತು ಮಹಿಳಾ ಪ್ರಶಸ್ತಿಗೆ ರಾಫೆಲ್‌ ನಡಾಲ್ ಮತ್ತು ಸೆರೆನಾ ವಿಲಿಯಮ್ಸ್‌ ಅವರನ್ನು ಆಯ್ಕೆ ಮಾಡಿದೆ.

ಗಾಯದಿಂದ ನಡಾಲ್‌ 7 ತಿಂಗಳುಗಳವರೆಗೆ ಪಂದ್ಯಾವಳಿಯಿಂದ ದೂರ ಸರಿದಿದ್ದರು, ಮರಳಿ ಪಂದ್ಯಾವಳಿಗೆ ಬಂದ ನಡಾಲ್, ಫ್ರೆಂಚ್‌‌ ಓಪನ್‌‌ , ಅಮೆರಿಕಾ ಓಪನ್‌‌ ಮತ್ತು 5 ಮಾಸ್ಟರ್ಸ್ ಸೀರೀಜ್‌ ಪ್ರಶಸ್ತಿ ಗೆದ್ದು ಮತ್ತೆ ನಂಬರ್ ಒನ್‌ ಸ್ಥಾನವನ್ನು ಪಡೆದಿದ್ದರು.

ಸೆರೆನಾ ಕೂಡ ಈ ವರ್ಷ ಉತ್ತಮ ಪ್ರದರ್ಶನ ನೀಡಿ ಅಗ್ರ ಶ್ರೇಣಿಯಲ್ಲಿದ್ದಾರೆ. ಇವರು ಫ್ರೆಂಚ್‌ ಓಪನ್‌‌ನೊಂದಿಗೆ ಅಮೆರಿಕಾ ಓಪನ್‌‌ ಪ್ರಶಸ್ತಿ ತಮ್ಮದಾಗಿಸಿಕೊಂಡು ಒಟ್ಟು 17 ಗ್ರ್ಯಾಂಡ್‌ಸ್ಲೆಮ್‌‌ ಪ್ರಶಸ್ತಿ ಗಳಿಸಿದ್ದಾರೆ.

ನನ್ನ ವೃತ್ತಿ ಜೀವನದಲ್ಲಿ ಎರಡನೇ ಬಾರಿ ಈ ಪತ್ರಿಕೆ ವತಿಯಿಂದ ಪ್ರಶಸ್ತಿ ದೊರೆತಿರುವುದಕ್ಕೆ ಸಂತಸವಾಗಿದೆ ಎಂದು ನಡಾಲ್‌ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ