ನಾವಿಬ್ಬರೂ ಈಗಲೂ ಆಪ್ತ ಸ್ನೇಹಿತರು: ಖುರೇಷಿ

ಬುಧವಾರ, 30 ನವೆಂಬರ್ 2011 (13:45 IST)
PTI
ಭಾರತದ ಜತೆಗಾರ ರೋಹನ್ ಬೋಪಣ್ಣ ಜತೆ ಮುನಿಸಿಕೊಂಡಿದ್ದಾರೆ ಎಂಬ ವರದಿಗಳನ್ನು ನಿರಾಕರಿಸಿರುವ ಪಾಕಿಸ್ತಾನ ಡಬಲ್ಸ್ ಪಟು ಹಾಶೀಮ್ ಉಲ್ ಹಕ್ ಖುರೇಷಿ, ನಾವಿಬ್ಬರು ಉತ್ತಮ ಸ್ನೇಹಿತರಾಗಿದ್ದೇವೆ ಎಂದಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

2007ರಲ್ಲಿ ಜತೆಯಾಗಿದ್ದ ಬೋಪಣ್ಣ-ಖುರೇಷಿ ಜೋಡಿ ಹಲವು ಪ್ರಮುಖ ಟೂರ್ನಿಗಳನ್ನು ವಶಪಡಿಸಿಕೊಳ್ಳುವ ಮೂಲಕ ವಿಶ್ವ ಪ್ರಖ್ಯಾತ ಜೋಡಿಗಳಿಗೆ ಪ್ರಮುಖ ಸವಾಲಾಗಿ ಪರಿಣಮಿಸಿದ್ದರು. ಆದರೆ ಮುಂದಿನ ಋತುವಿನಿಂದ ಬೇರೆ ಬೇರೆಯಾಗಿ ಆಡಲು ನಿರ್ಧರಿಸಿದ್ದರು.

ಬೋಪಣ್ಣ-ಖುರೇಷಿ ಬಾಂಧವ್ಯವು ಸಾಂಪ್ರಾದಾಯಿಕ ಎದುರಾಳಿಯಾದ ಭಾರತ ಮತ್ತು ಪಾಕಿಸ್ತಾನ ನಡುವೆ ಉತ್ತಮ ಭಾವಕ್ಯತೆಯ ಸಂದೇಶವನ್ನು ಸಾರಿತ್ತು. ಕಳೆದ ವರ್ಷ ಅಮೆರಿಕನ್ ಓಪನ್ ಡಬಲ್ಸ್ ವಿಭಾಗದಲ್ಲಿ ರನ್ನರ್ ಅಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದ ಈ ಜೋಡಿ ಪ್ರಸ್ತುತ ರ‌್ಯಾಂಕಿಂಗ್‌ನಲ್ಲಿ ಒಂಬತ್ತನೇ ಸ್ಥಾನದಲ್ಲಿತ್ತು.

ಆದರೆ ಮುಂಬರುವ ಲಂಡನ್ ಒಲಿಂಪಿಕ್ಸ್ ಗುರಿಯಾಗಿರಿಸಿಕೊಂಡಿದ್ದ ಬೋಪಣ್ಣ, ಭಾರತದ ಹಿರಿಯ ಜತೆಗಾರ ಮಹೇಶ್ ಭೂಪತಿ ಜತೆ ಆಡಲು ನಿರ್ಧರಿಸಿದ್ದರು. ಆದರೆ ಇದನ್ನು ಬೇರೆಯಾಗಿಯೇ ವ್ಯಾಖ್ಯಾನಿಸಿದ್ದ ಮಾಧ್ಯಮಗಳು ಬೋಪಣ್ಣ ಹಾಗೂ ಖುರೇಷಿ ನಡುವೆ ಎಲ್ಲವೂ ಸರಿಹೋಗುತ್ತಿಲ್ಲ ಎಂದು ವರದಿ ಮಾಡಿದ್ದವು.

ಈ ಎಲ್ಲ ವರದಿಗಳನ್ನು ಖುರೇಷಿ ತಳ್ಳಿಹಾಕಿದ್ದು, ನಾವಿಬ್ಬರು ಉತ್ತಮ ಸ್ನೇಹಿತರಾಗಿದ್ದು, ನನ್ನ ಮದುವೆಗೂ ಅವರನ್ನು ಆಮಂತ್ರಿಸಿದ್ದೇನೆ ಎಂದಿದ್ದಾರೆ.

ಮೂರು ತಿಂಗಳ ಹಿಂದೆ ನನ್ನ ಬಳಿ ಬಂದಿದ್ದ ಬೋಪಣ್ಣ, ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಮಹೇಶ್ ಭೂಪತಿ ಜತೆ ಆಡುತ್ತೇನೆ ಎಂದಿದ್ದರು. ಆರಂಭದಲ್ಲಿ ನಿರ್ಧಾರವು ನನಗೆ ಅಚ್ಚರಿ ತಂದಿದ್ದರೂ ನಾನು ಅವರ ತೀರ್ಮಾನವನ್ನು ಗೌರವಿಸುತ್ತೇನೆ ಎಂದಿದ್ದಾರೆ.

ನಾವಿಬ್ಬರು ಉತ್ತಮ ಸ್ನೇಹಿತರಾಗಿಯೇ ಮುಂದುವರಿಯಲಿದ್ದು, ಎರಡು ದೇಶಗಳ ನಡುವಣ ಶಾಂತಿಯ ದೂತರಾಗಲಿದ್ದೇವೆ ಎಂದಿದ್ದಾರೆ. ಡಿಸೆಂಬರ್ 16ರಂದು ಲಾಹೋರ್‌ನಲ್ಲಿ ಖುರೇಷಿ ಮದುವೆ ಈಡೇರಲಿದೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ