'ಪದ್ಮ ಶ್ರೀ' ಸಂಭಾವಿತರಲ್ಲಿ ಭುಟಿಯಾ

ಗುರುವಾರ, 24 ಜನವರಿ 2008 (12:40 IST)
ಭಾರತ ಪುಟ್ಬಾಲ್ ತಂಡದ ನಾಯಕ ಬೈಚುಂಗ್ ಭುಟಿಯಾ, ಭಾರತ ಸರಕಾರ ನೀಡುವ ಪ್ರತಿಷ್ಠಿತ ನಾಗರೀಕ ಪ್ರಶಸ್ತಿಯಾಗಿರುವ 'ಪದ್ಮ ಶ್ರೀ' ಪ್ರಶಸ್ತಿಯ ಸಂಭಾವಿತರ ಪಟ್ಟಿಗೆ ಆಯ್ಕೆಯಾಗಿದ್ದಾರೆ.

ಹಲವು ವರ್ಷಗಳ ಫುಟ್ಬಾಲ್ ಮೂಲಕ ಭಾರತೀಯ ಕ್ರೀಡಾ ಕ್ಷೇತ್ರಕ್ಕೆಭುಟಿಯಾ ನೀಡಿರುವ ಸೇವೆಯನ್ನು ಪರಿಗಣಿಸಿದ ಕ್ರೀಡಾ ಸಚಿವಾಲಯ ಅವರ ಹೆಸರನ್ನು ಪ್ರತಿಷ್ಠಿತ ಪ್ರಶಸ್ತಿಯಾಗಿರುವ 'ಪದ್ಮ ಶ್ರೀ' ಯ ಸಂಭಾವಿತರ ಪಟ್ಟಿಯೊಳಗೆ ಸೇರಿಕೊಂಡಿದ್ದಾರೆ

'ನಾನು 'ಪದ್ಮ ಶ್ರೀ' ಯ ಸಂಭಾವಿತರ ಪಟ್ಟಿಗೆ ಆಯ್ಕೆಯಾಗಿರುವ ಕುರಿತು ಮಾಹಿತಿಯಿದೆ. ಆದರೆ, ನಾನು ಇದರ ಬಗ್ಗೆ ಪ್ರತಿಕ್ರಿಯಿಸಲು ಇಷ್ಟಪಡುವುದಿಲ್ಲ. ಪ್ರಸ್ತುತ ಹೆಸರು ಸಂಭಾವಿತರ ಪಟ್ಟಿಯಲ್ಲಿ ಇದ್ದು, ಅಂತಿಮ ಘೋಷಣೆಯಾಗಿಲ್ಲ. ಇದನ್ನು ಕ್ರೀಡಾ ಸಚಿವರು ಅಂತಿಮವಾಗಿ ನಿರ್ಣಯ ಮಾಡಿದ ನಂತರ ತಿಳಿಯಲಿದೆ' ಎಂದು ಭುಟಿಯಾ ತಮ್ಮ ಹೆಸರು ಪ್ರಕಟವಾಗಿರುವುದಕ್ಕೆ ಪ್ರತಿಕ್ರಿಯಿಸಿದರು.

1998 ರಲ್ಲಿ ಅರ್ಜುನ ಪ್ರಶಸ್ತಿ ಪಡೆದಿರುವ ಭುಟಿಯಾ ಅವರ ಹೆಸರು ಅಂತಿಮ ಪಟ್ಟಿಯಲ್ಲಿ ಆಯ್ಕೆಯಾದರೆ,ಇದು ಫುಟ್ಬಾಲ್ ಕ್ಷೇತ್ರಕ್ಕೆ ದೊರಕುವ ಆರನೇ 'ಪದ್ಮ ಶ್ರೀ'.

ಈ ಮೊದಲು ಗೋಸ್ತೋ ಬಿಹಾರಿ ಪೌಲ್(1962) ಸೈಲನ್ ಮಾನ್ನಾ(1971)ಚುನಿ ಗೋಸ್ವಾಮಿ(1983) ಮತ್ತು ಪಿ.ಕೆ.ಬ್ಯಾನರ್ಜಿ (1990) ರಲ್ಲಿ 'ಪದ್ಮ ಶ್ರೀ' ಪಡೆದುಕೊಂಡಿದ್ದರು.

ವೆಬ್ದುನಿಯಾವನ್ನು ಓದಿ