ಪುಟ್ಬಾಲ್: ಲೆಬನಾನ್ ವಿರುದ್ಧ ಡ್ರಾ

ಮಂಗಳವಾರ, 30 ಅಕ್ಟೋಬರ್ 2007 (19:27 IST)
ಪಾತೋರ್ಡಾದ ನೆಹರು ಸ್ಟೆಡಿಯಂನಲ್ಲಿ ನಡೆದ ಲೆಬನಾನ್ ವಿರುದ್ಧ ನಡೆದ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯ 2-2 ಗೋಲಿನ ಅಂತರದಿಂದ ಡ್ರಾದಲ್ಲಿ ಅಂತ್ಯಗೊಂಡಿದೆ.

ಜೆಸಿಟಿಯ ಸುನಿಲ್ ಛೇತ್ರಿ ಅವರು ಪ್ರಥಮಾರ್ಧದ 29ನೇ ನಿಮಿಷದಲ್ಲಿ ದಾಖಲಿಸಿದ ಗೋಲಿನ ನೆರವಿನಿಂದ ಭಾರತ ಮುನ್ನಡೆ ಸಾಧಿಸಿತು. ನಂತರ ನಾಯಕ ಬೈಚುಂಗ್ ಭೂತಿಯಾ ಮತ್ತೊಂದು ಗೋಲು ಬಾರಿಸಿ ಪಂದ್ಯದಲ್ಲಿ ಭಾರತದ ಎರಡು ಗೋಲಿನ ಮುನ್ನಡೆಗೆ ಕಾರಣರಾದರು.

ಆದರೆ ಪಂದ್ಯದ ದ್ವಿತೀಯಾರ್ಧದಲ್ಲಿ ಸಂಘಟಿತ ದಾಳಿಯನ್ನು ಆಯೋಜಿಸಿದ ಲೆಬನಾನ್ ತಂಡ ಕೊನೆಗೆ ಯಶ ಸಾಧಿಸಿತು ಲೆಬನಾಲ್ ತಂಡದ ಮಹ್ಮದ್ ಘಟ್ಟರ್ ಅವರು 80 ಮತ್ತು 86 ನೇ ನಿಮಿಷದಲ್ಲಿ ಮಾಡಿದ ಎರಡು ಗೋಲುಗಳು ಪಂದ್ಯವನ್ನು ಭಾರತದ ಕೈಯಿಂದ ಕಿತ್ತುಕೊಳ್ಳುವಲ್ಲಿ ಸಫಲವಾದವು.

ನಂತರ ಭಾರತೀಯ ಫುಟ್ಬಾಲ್ ತಂಡ ಗೋಲು ಮಾಡುವ ಪ್ರಯತ್ನ ಮಾಡಿತಾದರೂ ಫಲ ಮಾತ್ರ ದೊರೆಯಲ್ಲಿಲ್ಲ. ಪಂದ್ಯದ ಅಂತಿಮ ಹಂತದವರೆಗೆ ಭಾರತ ರಕ್ಷಣೆಯನ್ನು ಬಿಗಿ ಮಾಡಿದ್ದರೆ ಭಾರತದ ಗೆಲುವು ನಿಶ್ಚಿತವಿತ್ತು. ಕೊನೆಯ ಹತ್ತು ನಿಮಿಷಗಳ ಅವಧಿಯಲ್ಲಿ ಭಾರತ ಎಡವಿದ್ದರಿಂದ ವಿಶ್ವಕಪ್‌ ಅರ್ಹತಾ ಸುತ್ತಿನಲ್ಲಿ ಆಡುವುದರಿಂದ ವಂಚಿತವಾಯಿತು

ವೆಬ್ದುನಿಯಾವನ್ನು ಓದಿ