ಪುಟ್ ಬಾಲ್: ಹೆಚ್ಚಿದ್ಸ ನೇಮಾರ್ ಟಿ ಶರ್ಟ್‌ ಬೇಡಿಕೆ

ಬುಧವಾರ, 17 ಜುಲೈ 2013 (14:56 IST)
PR
PR
ನಮ್ಮ ದೇಶದಲ್ಲಿ ಕ್ರಿಕೆಟ್ ಟಿ ಶರ್ಟ್‌ ಗೆ ಬೇಡಿಕೆ ಇದ್ದಂತೆ ವಿದೇಶದಲ್ಲಿ ಪುಟ್ ಬಾಲ್ ಚಿತ್ರ ಒಳಗೊಂಡ ಟೀಶರ್ಟ್ ಗೆ ಹೆಚ್ಚು ಬೇಡಿಕೆ ಇದೆ , ಇತ್ತೀಚೆಗಷ್ಟೇ ಕಾನ್ಫೆಡರೇಷನ್ ಫುಟ್ಬಾಲ್ ಕಪ್‌ನಲ್ಲಿ ಆಕರ್ಷಕ ಪ್ರದರ್ಶನ ನೀಡಿದ್ದ ಬ್ರೆಜಿಲ್‌ನ ಫುಟ್ಬಾಲ್ ತಾರೆ ನೇಮಾರ್‌ಗೆ, ನಂಬರ್ 7 ಅಥವಾ 11 ಜರ್ಸಿ ಆಯ್ಕೆ ಮಾಡಿಕೊಳ್ಳಲು ಬಾರ್ಸಿಲೋನಾ ಕ್ಲಬ್ ಹೇಳಿದೆಯಂತೆ.

ಕ್ಲಬ್‌ನ ಮಿಡ್‌ಫೀಲ್ಡರ್ ಥೈಗೋ ಆಲ್ಕಂಟಾರಾ ಅವರೊಂದಿಗೆ ಒಪ್ಪಂದ ಮಾಡಿಕೊಂಡಿರುವುದನ್ನು ಬೇರ್ನ್ ಮ್ಯೂನಿಚ್ ಖಚಿತಪಡಿಸಿರುವುದರಿಂದ, ಸೋಮವಾರದ ನಂತರ ನಂಬರ್ 11 ಜರ್ಸಿ ಲಭ್ಯವಿದೆ. ಇನ್ನು ಡೇವಿಡ್ ವಿಲ್ಲಾ ಅವರು ಆಟ್ಲೆಟಿಕೋ ಮ್ಯಾಡ್ರಿಂಡ್ ತಂಡಕ್ಕೆ ತೆರಳುತ್ತಿರುವುದರಿಂದ ನಂಬರ್ 7 ಜರ್ಸಿ ಸಹ ಲಭ್ಯವಿದೆ ಎಂದು ತಂಡ ತಿಳಿಸಿದೆ.

ಈ ಕುರಿತು ಶೀಘ್ರವೇ ಉತ್ತರ ನೀಡುವಂತೆ ಬಾರ್ಸಿಲೋನಾ ಕ್ಲಬ್ ನೇಮಾರ್‌ಗೆ ಕೇಳಿದಿಯಂತೆ. ಕಾರಣ ನೇಮಾರ್ ಹೆಸರಿನ ಜರ್ಸಿ ನಂಬರ್ ಟಿ ಶರ್ಟ್‌ಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಅದು ಮಾರುಕಟ್ಟೆಯನ್ನು ಆಕ್ರಮಿಸುವ ತವಕದಲ್ಲಿದೆ. 21 ವರ್ಷದ ಆಟಗಾರ ನಂಬರ್ 11 ಜರ್ಸಿಯನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಪ್ರಸ್ತುತ ಬ್ರೆಜಿಲ್‌ನಲ್ಲಿ ರಜೆ ಕಳೆಯುತ್ತಿರುವ ನೇಮಾರ್ ಜುಲೈ 25ರ ವರೆಗೂ ಬಾರ್ಸಿಲೋನಾ ತಂಡಕ್ಕೆ ಅಲಭ್ಯರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ