ಫಾರ್ಮೂಲಾ ಒನ್ : ನೈಸ್ ರಸ್ತೆಯಲ್ಲಿ ಹ್ಯಾಮಿಲ್ಟನ್ ರೇಸ್

ಮಂಗಳವಾರ, 27 ಸೆಪ್ಟಂಬರ್ 2011 (18:39 IST)
PTI
ವಿಶ್ವದ ಹಲವು ರಾಷ್ಟ್ರಗಳ ಫಾರ್ಮುಲಾ ಒನ್ ರೇಸ್‌ನಲ್ಲಿ ಪಾಲ್ಗೊಂಡಿರುವ ಚಾಲಕ ಲೆವಿಸ್ ಹ್ಯಾಮಿಲ್ಟನ್, ನೈಸ್ ರಸ್ತೆಯಲ್ಲಿ ನಡೆಯಲಿರುವ 500 ಮೀಟರ್ ರೇಸ್‌ನಲ್ಲಿ ಪಾಲ್ಗೊಂಡು ನೆರೆದಿದ್ದ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು.

26 ವರ್ಷ ವಯಸ್ಸಿನ ಹ್ಯಾಮಿಲ್ಟನ್, ಇನ್ನೂ ಸಾರ್ವಜನಿಕ ಉಪಯೋಗಕ್ಕೆ ತೆರೆಯದ ನೈಸ್ ರಸ್ತೆಯಲ್ಲಿ ಎಫ್‌ 1 ಕಾರನ್ನು ರಾಕೆಟ್ ವೇಗದಲ್ಲಿ ಓಡಿಸಿ, ಪ್ರೇಕ್ಷಕರನ್ನು ರಂಜಿಸಿದರು.

ಆದಾಗ್ಯೂ, ಹ್ಯಾಮಿಲ್ಟನ್‌ನೊಂದಿಗೆ ರೇಸ್‌ನಲ್ಲಿ ಇತರ ಸ್ಪ್ರಧಾಳಉಗಳು ಪಾಲ್ಗೊಂಡಿರಲಿಲ್ಲ. ಎಫ್‌ 1 ಕಾರಿನಲ್ಲಿ ಕುಳಿತ ತಕ್ಷಣವೇ ಕೆಲವೇ ಸೆಕೆಂಡ್‌‌ಗಳಲ್ಲಿ ವೇಗಕ್ಕೆ ಮೊರೆಹೋಗಿ,ಕಾರು ರೇಸ್ ಪ್ರಿಯಕ ಮನ ಗೆಲ್ಲುವಲ್ಲಿ ಯಶಸ್ವಿಯಾದರು.

ಹ್ಯಾಮಿಲ್ಟನ್, ಭಾರತಕ್ಕೆ ನಾಲ್ಕನೇ ಬಾರಿಗೆ ಭೇಟಿ ನೀಡಿದ್ದು ಬೆಂಗಳೂರಿಗೆ ಮೊದಲ ಬಾರಿಗೆ ಆಗಮಿಸಿದ್ದಾರೆ. ಪ್ರಾಯೋಜಕರಾದ ವೋಡಾಫೋನ್ ಕಂಪೆನಿಯ ಸ್ಪರ್ಧಾಪರೀಕ್ಷೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿದರು

ಇಂಡಿಯನ್ ಗ್ರ್ಯಾಂಡ್‌ಪ್ರಿಕ್ಸ್ ಪಂದ್ಯಾವಳಿ ನವದೆಹಲಿಯ ಗ್ರೇಟರ್ ನೊಯ್ಡಾ ಬಳಿ ಆಕ್ಟೋಬರ್ 28-30 ರವರೆಗೆ ನಡೆಯಲಿದೆ. ಹ್ಯಾಮಿಲ್ಟನ್ ರೇಸ್‌ನಲ್ಲಿ ಭಾಗವಹಿಸುತ್ತಿರುವುದರಿಂದ, ಸಾವಿರಾರು ಪ್ರೇಕ್ಷಕರು ರೇಸ್‌ನ ರಸದೌತಣ ಸವಿಯಲಿದ್ದಾರೆ.

ವೆಬ್ದುನಿಯಾವನ್ನು ಓದಿ